ಪುತ್ತೂರು: ಪುತ್ತಿಲ ಪರಿವಾರ ಟ್ರಸ್ಟ್ ವತಿಯಿಂದ ಆಗಸ್ಟ್ 3 ರಂದು ಪುತ್ತೂರಿನ ಕಾರ್ಜಾಲು ಗದ್ದೆಯಲ್ಲಿ ನಡೆಯುವ “ಪುತ್ತೂರ್ದ ಕೆಸರ್ದ ಗೊಬ್ಬು- 2025” ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಸೋಮವಾರ ನೆರವೇರಿತು.
ಬೆಳಿಗ್ಗೆ ಗರ್ಭಗುಡಿಯಲ್ಲಿ ದೇವಸ್ಥಾನದ ಅರ್ಚಕ ಜಯರಾಮ ಭಟ್ ಅವರು ಪ್ರಾರ್ಥನೆ ನೆರವೇರಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪುತ್ತಿಲ ಪರಿವಾರ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಜಿಲ್ಲಾ ಬಿಜೆಪಿಯ ಪ್ರಸನ್ನ ಮಾರ್ತ, ಪುತ್ತಿಲ ಪರಿವಾರದ ಶ್ರೀಕೃಷ್ಣ ಉಪಾಧ್ಯಾಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
























