ನಮ್ಮ ಬೆಂಗಳೂರಿನ ‘ ನಮ್ಮ ಮೆಟ್ರೋ ‘ ರೈಲಿಗೆ ಚಾಲಕ ರಹಿತ ಅಂತಾರಾಷ್ಟ್ರೀಯ ಐಎಸ್‌ಎ (Independent Safety Assessment – ISA) ಗ್ರೀನ್ ಸಿಗ್ನಲ್ ವ್ಯವಸ್ಥೆ | ಬೆಂಗಳೂರಿನ ಹಳಿಗಳಿಗೆ ಮತ್ತೊಂದು ಹೈಟೆಕ್ ಕೊಡುಗೆ

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಿರ್ಮಿಸುತ್ತಿರುವ ಚಾಲಕ ರಹಿತ ಮೆಟ್ರೋ ವ್ಯವಸ್ಥೆಗೆ ಅಂತರರಾಷ್ಟ್ರೀಯ ಸ್ವತಂತ್ರ ಸುರಕ್ಷತಾ ಮೌಲ್ಯಮಾಪಕ ಸಂಸ್ಥೆಯಿಂದ ಹಸಿರು ನಿಶಾನೆ ದೊರೆತಿದೆ. ಇದು ಬೆಂಗಳೂರಿನ ಮೆಟ್ರೋ ಜಾಲದಲ್ಲಿ ಚಾಲಕ ರಹಿತ ರೈಲುಗಳ ಸುಗಮ-ಸುರಕ್ಷ-ಸ್ವತಂತ್ರ ಸಂಚಾರಕ್ಕೆ ನಾಂದಿ ಹಾಡಲಿದೆ.

ಮೊದಲಿಗೆ ವಿಮಾನ ನಿಲ್ದಾಣ ಮಾರ್ಗ (ಬ್ಲೂ ಲೈನ್) ಮತ್ತು ನಂತರದಲ್ಲಿ ಇತರ ಮಾರ್ಗಗಳಲ್ಲಿ ಈ ವ್ಯವಸ್ಥೆಯಡಿಯಲ್ಲಿ ಸಂಚಾರವನ್ನು ಯೋಜಿಸಲಾಗಿದೆ. ಇದು ಅತ್ಯಾಧುನಿಕ ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ತಂತ್ರಜ್ಞಾನವನ್ನು ಅವಲಂಬಿಸಿದ್ದು, ಮಾನವನ ಹಸ್ತಕ್ಷೇಪವಿಲ್ಲದೆ ರೈಲುಗಳು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತವೆ.

ಮುಂದೆ ಮೆಟ್ರೋ ರೈಲು ಪ್ರಯಾಣಿಕರಿಗೆ ಸಮಯದ ಉಳಿತಾಯದ ಜೊತೆಗೆ ಭದ್ರತೆಯ ಭಾವ ಹೆಚ್ಚಾಗಲಿದೆ. ಹೆಚ್ಚು ರೈಲು ಆವರ್ತನವನ್ನು ಇದು ಸಾಧ್ಯವಾಗಿಸುತ್ತದೆ.





















































 
 
error: Content is protected !!
Scroll to Top