ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಉಜಿರುಪಾದೆ ಮಾದರಿ ಗ್ರಾಮ ಸಮಿತಿಯಿಂದ ಆಟಿ ಆಚರಣೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ

ಪುತ್ತೂರು: ಪುತ್ತೂರು ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್, ಮಾದರಿ ಗ್ರಾಮ ಸಮಿತಿ ಬಲ್ನಾಡು ಇದರ ಆಶ್ರಯದಲ್ಲಿ ಆಟಿ ಆಚರಣೆ ಹಾಗೂ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಭಾನುವಾರ ಬಲ್ನಾಡಿನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ಸಾಧಕ ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರ ನೀಡಲಾಯಿತು. ಗ್ರಾಮದ ಸ್ಥಳೀಯರು ನೀಡಿದ ಸೇವೆಗಾಗಿ ಸಮುದಾಯದ ಸತೀಶ್ ಗೌಡ ಒಳಗುಡ್ಡೆ, ಸೀತಾರಾಮ ಗೌಡ ಕಾಂತಿಲ, ತೀರ್ಥ ಪ್ರಸಾದ್ ಕಾಂತಿಲ, ಅಚ್ಚುತ ಗೌಡ ಕೋಡಿಯಡ್ಕ ಲೋಕೇಶ್ ಗೌಡ ಪಟ್ಟೆ ಅವರನ್ನು ಸನ್ಮಾನಿಸಲಾಯಿತ. 1ನೇ ತರಗತಿಯಿಂದ 10ನೇ ತರಗತಿಯ  ವಿದ್ಯಾರ್ಥಿಗಳಿಗೆ ಶಾಲಾ  ಪುಸ್ತಕ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಒಕ್ಕಲಿಗ ಗೌಡ ಸ್ವ ಸಹಾಯ ಟ್ರಸ್ಟ್ ಅಧ್ಯಕ್ಷ ಡಿ.ವಿ. ಮನೋಹರ್ ಗೌಡ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಮಹಿಳಾ ಸಂಘದ ಅಧ್ಯಕ್ಷೆ ವಾರಿಜ ಬೆಳಿಯಪ್ಪ ಗೌಡ, ಗೋಪಾಲಕೃಷ್ಣ ಪಟೇಲ್ ಚಾರ್ವಕ, ಗೀತಾ ಒಳಗುಡ್ಡೆ, ನಾರಾಯಣ ಗೌಡ ಕುಕ್ಕುತ್ತಡಿ, ಮಾಧವ ಗೌಡ ಕಾಂತಿಲ, ಚಂದ್ರಾವತಿ ಮುದಲಾಜೆ, ಸಂತೋಷ್ ಒಳಗುಡ್ಡೆ, ಮುತ್ತಪ್ಪ ಗೌಡ ಕಾಂತಿಲ, ಅಚ್ಚುತ ಕಲ್ಲಾಜೆ, ಮತ್ತು ಗೌಡ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಗೆ ಆಟಿ ತಿಂಗಳಿನ ಖಾದ್ಯ, ರುಚಿಕರ ಭೋಜನ ಸವಿಯಲಾಯಿತು.





















































 
 
error: Content is protected !!
Scroll to Top