ಹಿಂದೂಯೇತರ ಉದ್ಯೋಗಿಗಳಿಗೆ ಗೇಟ್‌ಪಾಸ್ ‌ನೀಡಿದ TTD

ಆಂಧ್ರಪ್ರದೇಶ: ಹಿಂದೂಯೇತರ ಧರ್ಮವನ್ನು ಪಾಲಿಸುತ್ತಿದ್ದ ನಾಲ್ವರನ್ನು ಕೆಲಸದಿಂದ ವಜಾ ಮಾಡಿ ತಿರುಪತಿ ತಿರುಮಲ ದೇಗುಲ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಹಿಂದೂ ಧಾರ್ಮಿಕ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಕ್ರೈಸ್ತ ಮತವನ್ನು ಈ ಉದ್ಯೋಗಿಗಳು ಆಚರಿಸುತ್ತಿದ್ದರು. ಇದು ಟಿಟಿಡಿ ಟ್ರಸ್ಟ್‌ನ ಸಾಂಸ್ಥಿಕ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಈ ಕಾರಣದಿಂದ ಅವರನ್ನು ವಜಾ ಮಾಡಲಾಗಿದೆ. ಹಿಂದೂ ಧಾರ್ಮಿಕ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ನಿರೀಕ್ಷಿತ ಧಾರ್ಮಿಕ ನಡವಳಿಕೆಯನ್ನು ಅನುಸರಿಸುವಲ್ಲಿ ಅಮಾನತಾದ ಉದ್ಯೋಗಿಗಳು ವಿಫಲರಾಗಿದ್ದಾಗಿಯೂ ಟ್ರಸ್ಟ್ ತಿಳಿಸಿದೆ.

ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕೆಲಸಗಾರರು ಸಂಸ್ಥೆಯ ಸಂಪ್ರದಾಯ, ನೀತಿ ನಿಯಮಗಳು, ಮೌಲ್ಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಹಾಗೆಯೇ ಶಿಸ್ತು ಮತ್ತು ವಿಶ್ವಾಸಾರ್ಹತೆ, ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಟ್ರಸ್ಟ್ ಹೇಳಿದೆ.





















































 
 
error: Content is protected !!
Scroll to Top