ಶ್ರೀನಗರ: ಉಗ್ರರನ್ನು ಮಟ್ಟ ಹಾಕಿ, ಭಯೋತ್ಪಾದನೆಯನ್ನು ನಿಗ್ರಹಿಸುವ ಸಲುವಾಗಿ ಕಣಿವೆಯ ಹಲವು ಕಡೆಗಳಲ್ಲಿ ಜಮ್ಮು ಕಾಶ್ಮೀರದ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೌಂಟರ್ ಇಂಟೆಲಿಜೆನ್ಸ್ ಕಾಶ್ಮೀರ್ ವಿಭಾಗದ ತಂಡಗಳು ಕಾಶ್ಮೀರದ ಕಣಿವೆಯಲ್ಲ 10 ಕಡೆಗಳಲ್ಲಿ ಉಗ್ರ ದಮನ ಕಾರ್ಯಾಚರಣೆಯ ಭಾಗವಾಗಿ ಶೋಧ ಕಾರ್ಯಗಳನ್ನು ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಉಗ್ರರ ನೇಮಕಾತಿ ನೆಲೆಗಳು ಮತ್ತು ಸ್ಲೀಪರ್ ಸೆಲ್ ಘಟಕಗಳ ಪತ್ತೆಗೆ ಈ ಶೋಧ ಕಾರ್ಯಗಳನ್ನು ನಡೆಸಲಾಗುತ್ತಿದೆ. ಗುಂಡೇರ್ಬಾಲ್, ಬುದ್ಗಾಮ್, ಪುಲ್ವಾಮಾ, ಶ್ರೀನಗರಗಳಿಗೆ ಸಂಬಂಧಿಸಿದಂತೆ ಈ ಕಾರ್ಯಾಚರಣೆ ನಡೆಯುತ್ತಿದೆ.
























