ಸವಣೂರು: ಕೆಟ್ಟು ನಿಂತಿದ್ದ ಸವಣೂರು ವಿದ್ಯುತ್ ಸಬ್ ಸ್ಟೇಷನಿನ 33/11 ಕೆವಿ ಪರಿವರ್ತಕವನ್ನು ಬದಲಿಸಿ, ಹೊಸ ಟ್ರಾನ್ಸ್ಫಾರ್ಮರ್ ಅಳವಡಿಸುವ ಕಾರ್ಯದ ನಂತರ ವಿದ್ಯುತ್ ಸರಬರಾಜು ಸರಾಗವಾಗಿ ನಡೆಯುತ್ತಿದೆ. ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಶಾಸಕ, ಸಚಿವ ಎಸ್. ಅಂಗಾರ, ಮೆಸ್ಕಾಂ ನಿರ್ದೇಶಕ ಕಿಶೋರ್ ಕುಮಾರ್ ಬೊಟ್ಯಾಡಿ, ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಮಾತುಗಳು ವ್ಯಕ್ತವಾಗಿದೆ.
ಕಳೆದ ಕೆಲ ದಿನಗಳಿಂದ ಟ್ರಾನ್ಸ್ಫಾರ್ಮರ್ ಕೆಟ್ಟು ಹೋಗಿತ್ತು. ಇದನ್ನು ಶಾಸಕ, ಮೆಸ್ಕಾಂ ನಿರ್ದೇಶಕರ ಗಮನಕ್ಕೆ ತಂದಾಗ, ತಕ್ಷಣವೇ ಸ್ಪಂದನೆ ನೀಡಿದ್ದಾರೆ. ಸಂಬಂಧಪಟ್ಟವರ ಗಮನಕ್ಕೆ ತಂದು, ಸಮಸ್ಯೆ ಬಗೆಹರಿಯುವಲ್ಲಿ ಶ್ರಮಿಸಿದ್ದಾರೆ. ತಕ್ಷಣದ ಕ್ರಮದಿಂದ ಇದೀಗ ವಿದ್ಯುತ್ ಪೂರೈಕೆ ನಿಯಮಿತವಾಗಿ ನಡೆಯುತ್ತಿದೆ ಎಂಬ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸ್ಥಳೀಯ ಎಲ್ಲಾ ಜನಪ್ರತಿನಿಧಿಗಳ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತವಾಗಿದೆ.