ಉಪ್ಪಿನಂಗಡಿ: ಸಹೋದರರ ನಡುವೆ ಜಗಳ ನಡೆದು ಕತ್ತಿಯಿಂದ ಮಾಡಿರುವ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಅಲಂಪಾಡಿ ಎಂಬಲ್ಲಿ ನಡೆದಿದೆ.
ರಾಜಶೇಖರ್ ಹಲ್ಲೆಗೊಳಗಾದ ವ್ಯಕ್ತಿ. ಅವರು ನೀಡಿದ ದೂರಿನ ಮೇಲೆ ಸಹೋದರರಾದ ಮನೋಜ್ ಮತ್ತು ಜಯರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜಶೇಖರ್ ರವರು ಮನೆಯಲ್ಲಿದ್ದ ಸಂದರ್ಭ ಸಹೋದರ ಮನೋಜ್ ಕುಮಾರ್ ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈಯ್ಯುತೊಡಗಿದ ಇನ್ನೊಬ್ಬ ಸಹೋದರ ಜಯರಾಜ್ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಅಕ್ರ (63/2025ಕಲಂ:352,118(1) ಮತ್ತು 3(5) BNS ರಂತೆ ಪ್ರಕರಣ ದಾಖಲಾಗಿದೆ.
























