ತಲೆಮರೆಸಿಕೊಂಡಿದ್ದ 8 ಕುಖ್ಯಾತ ಆರೋಪಿಗಳ ಬಂಧನ: ಸಿಸಿಬಿ ಪೊಲೀಸರ ಕಾರ್ಯಾಚರಣೆ

ಮಂಗಳೂರು : ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಎಂಟು ಆರೋಪಿಗಳನ್ನು ಮಂಗಳೂರು ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕಾವೂರಿನ ರಾಜಾ ಅಲಿಯಾಸ್ ರೋಹನ್ ರೆಡ್ಡಿ , ಪಡೀಲ್-ಕಣ್ಣೂರಿನ ಪ್ರಕಾಶ್ ಶೆಟ್ಟಿ, ಕೃಷ್ಣಾಪುರದ ನಿಸ್ಸಾರ್ ಹುಸೇನ್, ಕಸಬಾ ಬೆಂಗ್ರೆಯ ಕಬೀರ್, ಅಚ್ಯುತ್ ಮತ್ತು ಕಾವೂರಿನ ರಿಜ್ವಾನ್ ಬಂಧಿತರಲ್ಲಿ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಟು ಆರೋಪಿಗಳ ಪೈಕಿ ರೆಡ್ಡಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಅಲ್ಲಿ ನಕಲಿ ಗುರುತಿನಡಿಯಲ್ಲಿ ವಾಸಿಸುತ್ತಿದ್ದನು.ಈತ 2013ರಲ್ಲಿ ಬಸ್ ಚಾಲಕನ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.
ಎಸಿಪಿ ಪಿಎ ಹೆಗ್ಡೆ, ಇನ್ಸ್‌ಪೆಕ್ಟರ್ ಶ್ಯಾಮ್ ಸುಂದರ್, ಎಎಸ್‌ಐ ಮೋಹನ್ ಕೆವಿ ಮತ್ತಿತರರ ನೇತೃತ್ವದಲ್ಲಿ ಸಿಸಿಬಿ ಘಟಕ ಆರೋಪಿಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿತ್ತು.







































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top