ಆಧುನಿಕ ಶಸ್ತ್ರಾಸ್ತ್ರಗಳನ್ನು ನಾವೇ ತಯಾರಿಸುವಂತಾಗಬೇಕು: ಜನರಲ್ ಅನಿಲ್ ಚೌಹಾಣ್

ನವದೆಹಲಿ: ನಾವು ಇಂದು ಗೆಲುವು ಪಡೆಯಬೇಕಾದರೆ ‌ನಿನ್ನೆಯ ಶಸ್ತ್ರಾಸ್ತ್ರಗಳಿಂದ ಸಾಧ್ಯವಿಲ್ಲ. ಬದಲಾಗಿ ನಾಳಿನ ತಂತ್ರಜ್ಞಾನದ ಶಸ್ತ್ರಾಸ್ತ್ರಗಳು ನಮ್ಮ ಬತ್ತಳಿಕೆಯಲ್ಲಿ ಇರಬೇಕು ಎಂದು ಸೇನಾಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ನುಡಿದಿದ್ದಾರೆ.

ಸ್ವದೇಶಿ ನಿರ್ಮಿತ ಮಾನವ ರಹಿತ ವೈಮಾನಿಕ ಸಾಧನಗಳು (UAV) ಮತ್ತು ಅವುಗಳನ್ನು ಎದುರಿಸುವ C-UAVಗಳ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಆಪರೇಷನ್ ಸಿಂಧೂರ್ ಕುರಿತಾಗಿಯೂ ಮಾತನಾಡಿದ ಅವರು, ಪಾಕಿಸ್ತಾನದ ಸಿಡಿತಲೆ ಹೊತ್ತ ಡ್ರೋನ್‌ಗಳ ದಾಳಿಯಲ್ಲಿ ಭಾರತೀಯ ಸೇನೆ ಅಥವಾ ನಾಗರಿಕರ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಸವಾಲುಗಳನ್ನು ಎದುರಿಸಲು ಮುಂದಿನ ತಲೆಮಾರಿನ ಶಸ್ತ್ರಾಸ್ತ್ರಗಳನ್ನು ಹೊಂದುವುದು ಸದ್ಯದ ಅವಶ್ಯಕತೆಯಾಗಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂದಿನ ದಿನಗಳಲ್ಲಿ ನಡೆಯುವ ಯುದ್ಧಗಳಿಗೆ ಮುಂದುವರಿದ, ಆಧುನಿಕ ಶಸ್ತ್ರಾಸ್ತ್ರಗಳ ಅಗತ್ಯತೆ ಬಹಳಷ್ಟಿದೆ. ಹಿಂದಿನ ಶಸ್ತ್ರಾಸ್ತ್ರಗಳು ಇಂದಿನ ಯುದ್ಧಕ್ಕೆ ಸರಿಸಮವಲ್ಲ. ಹಾಗಾಗಿ ನಾವು ಸ್ವದೇಶಿ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಮಾಡುವುದು ಇಂದಿನ ತುರ್ತು. ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಅವಲಂಬನೆ ನಾವು ಮಾಡುವ ಯುದ್ಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.





















































 
 
error: Content is protected !!
Scroll to Top