ಬೆಂಗಳೂರು: ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಘಟನೆ ಮಾದನಾಯಕನಹಳ್ಳಿಯ ತೋಟದಗುಡ್ಡದಹಳ್ಳಿಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತನನ್ನು ಅಟೋ ಚಾಲಕ ದೀಪು (26) ಎಂದು ಗುರುತಿಸಲಾಗಿದೆ.
ಈತ ಬಾಲಕಿಯ ನೆರೆಮನೆಯ ನಿವಾಸಿಯಾಗಿದ್ದು ರಾತ್ರಿ ವೇಳೆ ಆಟೋ ಓಡಿಸಿ, ಹಗಲು ಮನೆಯಲ್ಲೇ ಇರುತ್ತಿದ್ದ. ನೆರೆಮನೆಯ ಬಾಲಕಿಯ ಜೊತೆಗೆ ಮಾತನಾಡುವ ನೆಪದಲ್ಲಿ ಮನೆಗೆ ಕರೆಸಿ ಆಕೆಯ ವಿರೋಧದ ನಡುವೆಯೂ ಅತ್ಯಾಚಾರ ನಡೆಸಿದ್ದಾನೆ.
ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಕೆಯ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ಆಕೆ ಗರ್ಭಿಣಿ ಎನ್ನುವ ಅಂಶ ಬಯಲಾಗಿದೆ. ಬಾಲಕಿಯರ ತಾಯಿ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಮಾದನಾಯಕನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
























