ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಉಪನ್ಯಾಸಕರು: ಆರೋಪಿಗಳ ಬಂಧನ

ಸಂತ್ರಸ್ತೆಯನ್ನು ಬ್ಲಾಕ್ಮೇಲ್ ಮಾಡಿ ಅತ್ಯಾಚಾರ ಮಾಡಿದ್ದ ಆರೋಪಿಗಳು

ಬೆಂಗಳೂರು: ವಿದ್ಯಾರ್ಥಿನ್ಯೊಬ್ಬಳ ಮೇಲೆ ಮೂಡುಬಿದ್ರೆಯ ಕಾಲೇಜೊಂದರ ಇಬ್ಬರು ಉಪನ್ಯಾಸಕರು ಮತ್ತು ಅವರ ಸ್ನೇಹಿತ ಅತ್ಯಾಚಾರ ಎಸಗಿದ್ದು, ಈ ಸಂಬಂಧ ಮಾರತಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಫಿಸಿಕ್ಸ್ ಉಪನ್ಯಾಸಕ ನರೇಂದ್ರ, ಬಯಾಲಜಿ ಉಪನ್ಯಾಸಕ ಸಂದೀಪ್ ಮತ್ತು ಅವರ ಸ್ನೇಹಿತ ಅನೂಪ್ ಎಂದು ಗುರುತಿಸಲಾಗಿದೆ.





















































 
 

ಆರೋಪಿ ನರೇಂದ್ರ ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿಯ ಜೊತೆ ಸಲುಗೆ ಬೆಳೆಸಿದ್ದಾನೆ. ಆಕೆ ಬೆಂಗಳೂರಿಗೆ ತೆರಳಿದ ನಂತರವೂ ಆಕೆಯ ಜೊತೆ ನಿರಂತರ ಸಂಪರ್ಕ ಸಾಧಿಸಿದ್ದಾನೆ. ನೋಟ್ಸ್ ನೀಡುವ ನೆಪದಲ್ಲೇ ಆಕೆಯನ್ನು ಬೆಂಗಳೂರಿನ ತನ್ನ ಸ್ನೇಹಿತ ಆರೋಪಿ ಅನೂಪ್‌ನ ರೂಮ್‌ಗೆ ಕರೆಸಿ ಅತ್ಯಾಚಾರ ನಡೆಸಿದ್ದಾನೆ. ಹಾಗೆಯೇ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಸಿದ್ದ.

ಇದಾದ ಬಳಿಕ ಮತ್ತೊಬ್ಬ ಆರೋಪಿ ಸಂದೀಪ್ ಸಹ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಕೆ ವಿರೋಧಿಸಿದಾಗ ನೀನು ನರೇಂದ್ರನ ಜೊತೆಗಿರುವ ಫೋಟೋ, ವಿಡಿಯೋ ನನ್ನ ಜೊತೆಗಿದ್ದು ಅದನ್ನು ಕಾಲೇಜಿನಲ್ಲಿ ವೈರಲ್ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾನೆ. ಈತನ ಬಳಿಕ ಆರೋಪಿ ಅನೂಪ್ ನೀನು ನನ್ನ ರೂಮ್‌ಗೆ ಬಂದು ಹೋದ ದೃಶ್ಯಗಳು ಸಿಸಿಟಿವಿಯಲ್ಲಿ ‌ಸೆರೆಯಾಗಿದೆ. ನನ್ನ ರೂಮ್‌ನಲ್ಲಿ ಸಿಸಿಟಿವಿ ಇದೆ ಎಂದು ಹೆದರಿಸಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಆರಂಭದಲ್ಲಿ ಉಪನ್ಯಾಸಕರ ಸ್ಥಾನದಲ್ಲಿದ್ದವರ ಮೇಲಿನ ಭಯಕ್ಕೆ ಸುಮ್ಮನಿದ್ದ ಯುವತಿ, ಆರೋಪಿಗಳ ಕಿರುಕುಳ ಹೆಚ್ಚಾದಾಗ ನಡೆದ ಘಟನೆಯನ್ನು ಪೋಷಕರಿಗೆ ‌ತಿಳಿಸಿದ್ದಾಳೆ. ಪೋಷಕರು ಮಹಿಳಾ ಆಯೋಗಕ್ಕೆ ಕರೆದೊಯ್ದು, ಕೌನ್ಸಲಿಂಗ್ ಮಾಡಿಸಿ ಆ ಬಳಿಕ ದೂರು ಕೊಡಿಸಿದ್ದಾರೆ.

ದೂರಿನನ್ವಯ ಮಾರತಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!
Scroll to Top