ವಿಟ್ಲ: ಚಂದಳಿಕೆ ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಮತ್ತು ಚಂದಳಿಕೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ ವತಿಯಿಂದ ಜರಗುವ 27ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಚಂದಳಿಕೆ ಮಂಗಳಾ ಮಂಟಪದಲ್ಲಿ ಬಿಡುಗಡೆ ಮಾಡಲಾಯಿತು.

ಸಮಿತಿ ಅಧ್ಯಕ್ಷ ಶಂಕರ ಭಟ್ ಬದನಾಜೆ ಬಿಡುಗಡೆಗೊಳಿಸಿದರು. ಸಮಿತಿ ಕಾರ್ಯಧ್ಯಕ್ಷ ಕೃಷ್ಣಯ್ಯ ಕೆ ಅರಮನೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕ್ಲಬ್ ಗೌರವಾಧ್ಯಕ್ಷ ಗಂಗಾಧರ ಸಿ. ಅಧ್ಯಕ್ಷ ಕರುಣಾಕರ ಗೌಡ ಎಂ. ಕಾರ್ಯದರ್ಶಿ ಚೇತನ್ ಕುಮಾರ್ ಕಲ್ಲಕಟ್ಟಾ. ಕೋಶಾಧಿಕಾರಿ ವಿಶ್ವನಾಥ ಎಂ. ಹಾಗೂ ಪದಾಧಿಕಾರಿಗಳಾದ ನರೇಂದ್ರ ಸಿ. ಜಗದೀಶ್ ಎಂ., ನಿತಿನ್ ಮುದೂರು. ಬೆಳಿಯಪ್ಪ ಎಂ. ಗೌರವ ಸಲಹೆಗಾರರುಗಳಾದ ಹರಿಗಣೇಶ ಸಿ., ಕೃಷ್ಣ ಮುದೂರು, ಸದಸ್ಯರು ಉಪಸ್ಥಿತರಿದ್ದರು. ಆ.27 ಹಾಗೂ ಆ.28 ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಚಂದಳಿಕೆ ಮಂಗಳ ಮಂಟಪದಲ್ಲಿ ವಿಜೃಂಭಣೆಯಿಂದ ಶ್ರೀ ಗಣೇಶೋತ್ಸವ ಜರಗಲಿದೆ
























