ಲಾರ್ಡ್ಸ್‌ನ ಐತಿಹಾಸಿಕ ಗೆಲುವಿನ ಅವಕಾಶ ಕೈಚೆಲ್ಲಿದ ಭಾರತ

ಬೈಸ್‌ ಮೂಲಕ ನೀಡಿದ 6 ಬೌಂಡರಿಗಳೇ ಭಾರತದ ಪಾಲಿಗೆ ಮುಳುವಾಯಿತು

ಲಂಡನ್‌ : ಪ್ರತಿಷ್ಠಿ ಲಾರ್ಡ್ಸ್‌ ಅಂಗಣದಲ್ಲಿ ಸಿಬಹುದಾಗಿದ್ದ ಐತಿಹಾಸಿಕ ಗೆಲುವೊಂದನ್ನು ಕೈಚೆಲ್ಲಿ ಶುಭಮನ್‌ ಗಿಲ್‌ ಪಡೆ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ರವೀಂದ್ರ ಜಡೇಜಾ ಕೊನೆಯವರೆಗೂ ಜಾರಿಯಲ್ಲಿಟ್ಟ ಕೆಚ್ಚಿನ ಹೋರಾಟ ವ್ಯರ್ಥವಾಗಿ 22 ರನ್‌ಗಳಿಂದ ಭಾರತ ಅಂಗ್ಲರಿಗೆ ಶರಣಾಗಿದೆ.

ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ನೀಡಿದ 193 ರನ್​ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 170 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಆಂಗ್ಲರ ಪಡೆ 22 ರನ್​ಗಳ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.





















































 
 

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಪ್ರಥಮ ಇನಿಂಗ್ಸ್​ನಲ್ಲಿ 387 ರನ್​ ಕಲೆಹಾಕಿದ್ದರು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ ಕೂಡ 387 ರನ್​ಗಳಿಸಿ ಆಲೌಟ್ ಆಗಿತ್ತು.

ಯಾವುದೇ ಮುನ್ನಡೆಯಿಲ್ಲದೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವನ್ನು 192 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಭಾರತೀಯ ಬೌಲರ್​ಗಳು ಯಶಸ್ವಿಯಾಗಿದ್ದರು. 193 ರನ್​ಗಳ ಸುಲಭ ಗುರಿ ಪಡೆದಿದ್ದ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 58 ರನ್​ ಕಲೆಹಾಕಿತ್ತು. ಆದರೆ 5ನೇ ದಿನದಾಟದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 170 ರನ್​​ಗಳಿಗೆ ಆಲೌಟ್ ಆಗಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಹಲವು ಕಾರಣಗಳಿವೆ. ಅವುಗಳಲ್ಲೊಂದು 6 ಫೋರ್​ಗಳು. ಈ ಆರು ಫೋರ್​ಗಳು ಮೂಡಿಬಂದಿರುವುದು ಬೈಸ್​ ಆಗಿ ಗಮನಾರ್ಹ. ಅಂದರೆ ಭಾರತೀಯ ಬೌಲರ್​ಗಳು ದ್ವಿತೀಯ ಇನಿಂಗ್ಸ್​ನಲ್ಲಿ ಅಗಲವಾದ ಎಸೆತಗಳ ಮೂಲಕ 6 ಬೈಸ್​ ಫೋರ್​ಗಳನ್ನು ನೀಡಿದ್ದರು.

ದ್ವಿತೀಯ ಇನಿಂಗ್ಸ್​ನ 2ನೇ ಓವರ್​ನ ಮೊದಲ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ಮೊದಲ ಬೈಸ್ ಫೋರ್​ ನೀಡಿದ್ದರು. ಇನ್ನು 12ನೇ ಓವರ್​ನ 5ನೇ ಎಸೆತವನ್ನು ಹಿಡಿಯುವಲ್ಲಿ ವಿಕೆಟ್ ಕೀಪರ್ ಧ್ರುವ್ ಜುರೇಲ್ ವಿಫಲರಾದರು. ಇದರಿಂದ ಕೂಡ ಇಂಗ್ಲೆಂಡ್ ತಂಡಕ್ಕೆ 4 ರನ್​ಗಳು ಲಭಿಸಿತು.

ಹಾಗೆಯೇ ಆಕಾಶ್ ದೀಪ್ ಎಸೆದ 24ನೇ ಓವರ್​ನ ಕೊನೆಯ ಎಸೆತವು ಬೈಸ್ ಆಗಿ ಬೌಂಡರಿ ಲೈನ್ ದಾಟಿತು. ಜಸ್​ಪ್ರೀತ್ ಬುಮ್ರಾ ಎಸೆದ 25ನೇ ಓವರ್​ನ ಮೊದಲ ಎಸೆತ ಕೂಡ ವಿಕೆಟ್ ಕೀಪರ್​ನನ್ನು ವಂಚಿಸಿ ಫೋರ್ ಆಯಿತು.

ಮೊಹಮ್ಮದ್ ಸಿರಾಜ್ ಎಸೆದ 34ನೇ ಓವರ್​ನ 5ನೇ ಎಸೆತ ಕೂಡ ಬೈಸ್ ಆಗಿ ಫೋರ್​ ಆಯಿತು. 36ನೇ ಓವರ್​ನ ಮೊದಲ ಎಸೆತವನ್ನು ಹಿಡಿಯುವಲ್ಲಿ ವಿಕೆಟ್ ಕೀಪರ್ ಧ್ರುವ್ ಜುರೇಲ್ ಹಿಡಿಯುವಲ್ಲಿ ವಿಫಲರಾದರು. ಇದರಿಂದ ಮತ್ತೊಂದು ಬೈಸ್ ಫೋರ್ ಲಭಿಸಿತು.

ಹೀಗೆ 6 ಬೈಸ್ ಫೋರ್​ಗಳ ಮೂಲಕ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್​ನಲ್ಲಿ ಹೆಚ್ಚುವರಿಯಾಗಿ ನೀಡಿದ್ದು ಬರೋಬ್ಬರಿ 32 ರನ್​ಗಳು. ಇದರಲ್ಲಿ ಬೈಸ್ ಫೋರ್​ಗಳಿಂದಲೇ 24 ರನ್​ಗಳು ಮೂಡಿಬಂದಿದ್ದವು. ಇತ್ತ ಭಾರತ ತಂಡ ಸೋತಿರುವುದು 22 ರನ್​ಗಳಿಂದ. ಅಂದರೆ ಟೀಮ್ ಇಂಡಿಯಾ ಪಾಲಿಗೆ ಬೈಸ್ ಫೋರ್​ಗಳೇ ಮುಳುವಾಗಿರುವುದು ಸ್ಪಷ್ಟ.

ಒಂದು ವೇಳೆ ಟೀಮ್ ಇಂಡಿಯಾ ಈ 6 ಬೈಸ್ ಫೋರ್​ಗಳನ್ನು ನೀಡದಿದ್ದರೆ, ಈ ಪಂದ್ಯದಲ್ಲಿ ಭಾರತ ತಂಡಕ್ಕೆ 169 ರನ್​ಗಳ ಗುರಿ ಲಭಿಸುತ್ತಿತ್ತು. ಈ ಮೂಲಕ ಟೀಮ್ ಇಂಡಿಯಾ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತಿದ್ದರು. ಆದರೆ ಬೌಲರ್​ಗಳು ಹಾಗೂ ವಿಕೆಟ್ ಕೀಪರ್ ಮಾಡಿದ ತಪ್ಪುಗಳಿಂದಾಗಿ ಫೋರ್​ಗಳ ಮೂಲಕ ಇಂಗ್ಲೆಂಡ್ ತಂಡಕ್ಕೆ 24 ರನ್​ಗಳು ಲಭಿಸಿದ್ದವು. ಈ ಹೆಚ್ಚುವರಿ ರನ್​ಗಳೇ ಟೀಮ್ ಇಂಡಿಯಾ ಸೋಲಿಗೆ ಕಾರಣವಾಯಿತು.

error: Content is protected !!
Scroll to Top