ಅಜಿತ್ ಮಡಿಕೇರಿಯನ್ನು ಪುತ್ತೂರಿನಲ್ಲಿ ಒಂದು ಗಂಟೆ ಮೆರವಣಿಗೆ ಮಾಡುತ್ತೇವೆ | ತಾಕತ್ತಿದ್ದರೆ ಶಾಸಕರು ತಡೆಯಲಿ | ಪ್ರತಿಭಟನೆಯಲ್ಲಿ ಸವಾಲೆಸೆದ ಮಾಜಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಅಜಿತ್ ಮಡಿಕೇರಿಯನ್ನು ಪುತ್ತೂರಿನಲ್ಲಿ ಒಂದು ಗಂಟೆ ಮೆರವಣಿಗೆ ಮಾಡುತ್ತೇವೆ. ಪುತ್ತೂರು ಶಾಸಕರಿಗೆ ತಾಕತ್ತಿದ್ದರೆ ಬಂದು ತಡೆಯಲಿ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಸವಾಲೆಸೆದಿದ್ದಾರೆ.

ಪುತ್ತೂರಿನಲ್ಲಿ ಸೋಮವಾರ ನಡೆದ ಮರಳು, ಕೆಂಪುಕಲ್ಲು ಅಭಾವದ ಕುರಿತು ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಪುತ್ತೂರು ಶಾಸಕರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಬಿಜೆಪಿ ಕಾರ್ಯಕರ್ತರು ಬಳೆಯಿಟ್ಟು ರಾಜಕೀಯ ಮಾಡಿದವರಲ್ಲ. ಬಿಜೆಪಿ ಕಾರ್ಯಕರ್ತರು ಸ್ವಾಭಿಮಾನಿಗಳು, ಹಣ, ಅಮಿಷಗಳಿಗೆ ಮರುಳಾಗುವವರು ಬಿಜೆಪಿಗರಲ್ಲ ಇಂದು ಯಾವುದಾದರೂ ಕೆಲಸಕ್ಕೆ ಶಾಸಕರ ಬಳಿ ಹೋದಲ್ಲಿ ಅವರಿಗೆ ಕಾಂಗ್ರೆಸ್ ಶಾಲು, ಧ್ವಜ ನೀಡಲಾಗುತ್ತಿದೆ. ಸರಕಾರಿ ಕೆಲಸ ಮಾಡಿಸಲು ಮನವಿ ನೀಡಲು ಹೋದಲ್ಲೂ ಇದೇ ಪರಿಸ್ಥಿತಿ. ಪುತ್ತೂರು ಶಾಸಕರು ಎಲ್ಲಾ ಕಡೆಗಳಲ್ಲೂ ಇದನ್ನೇ ಮಾಡುತ್ತಿದ್ದಾರೆ ಎಂದು ಹೇಳಿದರು. ನಾನು ಕೂಡಾ ಶಾಸಕನಾಗಿ ಇದ್ದವ, ನನ್ನ ಬಳಿಯೂ ಕಾಂಗ್ರೇಸ್ ನವರು, ಬೇರೆ ಪಕ್ಷದವರು ನಮ್ಮ ಬಳಿ ಬಂದಿದ್ದರು. ಅವರ ಕೆಲಸಗಳನ್ನು ನಾನು ಮಾಡಿಕೊಟ್ಟಿದ್ದೇನೆ. ನಾನು ಯಾವತ್ತೂ ಅವರಿಗೆ ಬಿಜೆಪಿ ಶಾಲು ಧ್ವಜ ಹಾಕಿಲ್ಲ, ಈಗೀನ ಶಾಸಕರ ಗೋಮುಖ ಮಾತ್ರ ನೀವು ನೋಡಿದ್ದೀರಿ, ವ್ಯಾಘ್ರ ಮುಖವನ್ಮು ನೀವು ನೋಡಿಲ್ಲ, ಪಿಸ್ತೂಲು ತೋರಿಸಿ ಎದುರಿಸಿದವರು, ಇದೇ ಮುಖವನ್ನು ಇಂದು ಜನರಿಗೆ ತೋರಿಸುವ ಪ್ರಯತ್ನದಲ್ಲಿ ಶಾಸಕರಿದ್ದಾರೆ ಎಂದು  ಮಠಂದೂರು ಹೇಳಿದ್ದಾರೆ.





















































 
 

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ‌ಪ್ರತಾಪ್‌ಸಿಂಹ ನಾಯಕ್‌, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಹಿರಿಯ ಬಿಜೆಪಿ ಮುಖಂಡ ಲೋಕೇಶ್‍ಹೆಗ್ಡೆ, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಉಪಸ್ಥಿತರಿದ್ದರು.

error: Content is protected !!
Scroll to Top