ಕಡಬ : ಮರಳು ಮತ್ತು ಕೆಂಪು ಕಲ್ಲು ಸಮಸ್ಯೆ ಬಗ್ಗೆ ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯ ದ ವಿರುದ್ಧ ಕಡಬದ ಮಿನಿ ವಿಧಾನ ಸೌಧದ ಬಳಿ ಸೋಮವಾರ ನಡೆಯಿತು.
ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯದ ಬಗ್ಗೆ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಭಾರತೀಯ ಜನತಾ ಪಕ್ಷ ಮಾತ್ರ ಜನಸಾಮಾನ್ಯರ ಜೊತೆ ನಿಲ್ಲುವಂತಹ ಪಕ್ಷ, ಕಾಂಗ್ರೆಸ್ ಸರಕಾರದ ವೈಫಲ್ಯದಿಂದ ವ್ಯಾಪಾರಸ್ತರು ಕಂಗಲಾಗಿದ್ದಾರೆ. ಕಾಂಗ್ರೆಸ್ ಸರಕಾರ ಇವತ್ತು ಗಾಣಿಗಾರಿಕೆ ಎಂಬ ಹೆಸರಿನಲ್ಲಿ ಇವತ್ತು ಕೆಂಪು ಕಲ್ಲು ಮತ್ತು ಮರಳನ್ನು ನಿಲ್ಲಿಸಿದೆ. ಇದರಿಂದಾಗಿ ಜನರ ಜೀವನಕ್ಕೆ ಹನಿಯಾಗ್ತಾ ಇದೆ, ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಬೇಕೆಂದು ಹೇಳಿದರು.
ಜನಕ್ರೋಶ ಸಭೆಯಲ್ಲಿ ಬಿಜೆಪಿ ದಕ್ಷಿಣ ಕನ್ನಡ ಉಪಾಧ್ಯಕ್ಷ ರಾಕೇಶ್ ರೈ ಕೆಡೆoಜಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಮನವಳಿಕ, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಕೃಷ್ಣ ಎಂ ಆರ್, ಕಡಬ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರಕಾಶ್, ಕಡಬ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಅಶೋಕ್ ಕಡಬ, ಮತ್ತು ಗುತ್ತಿಗೆದಾರರು, ಕಾರ್ಮಿಕರು, ಲಾರಿ ಚಾಲಕರು, ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.
























