RSS ಬಗ್ಗೆ ಮಾತನಾಡಲು ಪ್ರಿಯಾಂಕ್ ಖರ್ಗೆಗೆ ಯೋಗ್ಯತೆ ಇಲ್ಲ: ಕೆ. ಎಸ್. ಈಶ್ವರಪ್ಪ

ಬೆಂಗಳೂರು: RSS ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆಗೆ ಇಲ್ಲ. ಈ ದೇಶ ಉಳಿದಿರುವುದು ಕೇವಲ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಎಂದು ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.

ಯಾವುದೇ ಕಾರಣವಿಲ್ಲದೆ ಪ್ರಿಯಾಂಕ್ ಖರ್ಗೆ ಪ್ರಧಾನಿ ಮೋದಿ ಮತ್ತು RSS ಬಗ್ಗೆ ಟೀಕೆ ಮಾಡುತ್ತಾರೆ. ಈ ದೇಶದಲ್ಲಿ RSS ಇಲ್ಲದೇ ಹೋಗಿದ್ದರೆ ನಮಗೆಲ್ಲರಿಗೂ ವಿಚಿತ್ರ ಪರಿಸ್ಥಿತಿ ತಂದೊಡ್ಡಿ ಮತಾಂತರ ಮಾಡುವ ಸ್ಥಿತಿ ಎದುರಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಬಿರಗಳಲ್ಲಿ ಜಾತಿ ನೋಡಲಾಗುವುದಿಲ್ಲ. ಇದು ನಮಗೆ ಹೆಮ್ಮೆಯ ಸಂಗತಿ. ಇಂತಹ ಸಂಘದ ಬಗ್ಗೆ ಮಾತನಾಡಲು ಪ್ರಿಯಾಂಕ್‌ ಯಾರು? ಮಿಂಚುಹುಳದಷ್ಟೂ ಜ್ಞಾನ ಇಲ್ಲದ ಪ್ರಿಯಾಂಕ್ ಖರ್ಗೆಗೆ ಹಿಡಿದಿರುವ ಹುಚ್ಚು ಬಿಡಿಸಲು ಸಾಧ್ಯವಾಗುವ ಆಸ್ಪತ್ರೆ ಪ್ರಪಂಚದಲ್ಲೇ ಇಲ್ಲ ಎಂದು ತಿಳಿಸಿದ್ದಾರೆ.





















































 
 
error: Content is protected !!
Scroll to Top