ಡಿಆರ್ಡಿಒ ಅಭಿವೃದ್ಧಿಪಡಿಸಿದ ಸ್ವದೇಶಿ ಕ್ಷಿಪಣಿ
ನವದೆಹಲಿ: ಭಾರತೀಯ ವಾಯುಸೇನೆಗೆ ಮತ್ತೊಂದು ಶಕ್ತಿ ಸೇರ್ಪಡೆಯಾಗಿದ್ದು, ಡಿಆರ್ಡಿಒ ಅಭಿವೃದ್ಧಿ ಮಾಡಿರುವ ಏರ್-ಟು -ಏರ್ ಕ್ವಿಪಣಿ ಅಸ್ತ್ರ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.
ಇದನ್ನು ಒಡಿಶಾದ ಕರಾವಳಿ ತೀರದಲ್ಲಿ ಭಾರತೀಯ ವಾಯುಪಡೆಯ ಸುಖೋಯ್ 30 MK1 ಯುದ್ಧ ವಿಮಾನದ ಮೂಲಕ ಡಿಆರ್ಡಿಒ ಮತ್ತು ಭಾರತೀಯ ವಾಯುಸೇನೆ ಈ ಕ್ಷಿಪಣಿಯ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ. ಈ ಕ್ಷಿಪಣಿಗಳು ತಮ್ಮ ಗುರಿಗಳನ್ನು ಹೆಚ್ಚಿನ ನಿಖರತೆಯ ಜೊತೆಗೆ ಯಶಸ್ವಿಯಾಗಿ ತಲುಪಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ಚಂಢೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಿಯೋಜನೆ ಮಾಡಿದ ರೇಂಜ್ ಟ್ರ್ಯಾಕಿಂಗ್ ಉಪಗ್ರಹದ ಡೇಟಾ ಬಳಕೆ ಮಾಡಿಕೊಂಡು ಇದರ ಯಶಸ್ಸನ್ನು ದೃಢಪಡಿಸಲಾಗಿದೆ. ಇದು ಸ್ವದೇಶಿ ನಿರ್ಮಿತ ಕ್ಷಿಪಣಿಯಾಗಿದ್ದು, ಶತ್ರು ಗುರಿಗಳನ್ನು ಪತ್ತೆ ಮಾಡುವುದು, ನಾಶಮಾಡುವುದಕ್ಕೆ ಪೂರಕವಾಗಿ ರೇಡಿಯೋ ಸೀಕ್ವೆನ್ಸಿ ಸಾಕರ್ ಅನ್ನು ಡಿಆರ್ಡಿಒ ಅಭಿವೃದ್ಧಿ ಮಾಡಿರುವುದಾಗಿದೆ.
























