ನವದೆಹಲಿ: ಭಾರತದ ಮರಾಠ ಮಿಲಿಟರಿ ಭೂದೃಶ್ಯಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದ್ದು, ಇದಕ್ಕೆ ಪ್ರಧಾನಿ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಂತಸ ಹಂಚಿಕೊಂಜಿರುವ ಪ್ರಧಾನಿ ಮೋದಿ, ಇದು ಭಾರತದ ಸಾಂಸ್ಕೃತಿಕ ಪರಂಪರೆಗೆ ಸಲ್ಲಿಕೆಯಾದ ವಿಶ್ವ ಗೌರವ ಎಂದಿದ್ದಾರೆ. ಇದಕ್ಕಾಗಿ ದೇಶದ ಜನತೆದೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಹನ್ನೆರಡು ಕೋಟೆಗಳನ್ನು ಒಳಗೊಂಡಿರುವ ಈ ಮರಾಠ ಮಿಲಿಟರಿ ಭೂದೃಶ್ಯ ಕ್ರಿ.ಶ. 17 ರಿಂದ 19ನೇ ಶತಮಾನದಲ್ಲಿ ಅಭಿವೃದ್ಧಿ ಮಾಡಲಾಗಿರುವಂತಹವುಗಳಾಗಿವೆ. ಮರಾಠರ ಯುದ್ಧ ತಂತ್ರದ ಸೇನಾ ದೂರದೃಷ್ಟಿ, ಶ್ರೀಮಂತ ವಾಸ್ತುಶಿಲ್ವವನ್ನು ಈ ಭೂದೃಶ್ಯಗಳು ಒಳಗೊಂಡಿವೆ.
























