ಕೆದಿಲ ಅರುಣ ಸಾರಥಿ ಚಾಲಕರ ಸಂಘಟನೆಯಿಂದ ಸಹಾಯ ಹಸ್ತ ವಿತರಣೆ

ಪುತ್ತೂರು: ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಗಣೇಶ್  ವಳಂಗಜೆ ಕೆದಿಲ ಇವರಿಗೆ “ಅರುಣ ಸಾರಥಿ”ಚಾಲಕರ ಸಂಘಟನೆಯ ಸಹಯೋಗದಲ್ಲಿ 10,000 ರೂಪಾಯಿ ಧನಸಹಾಯವನ್ನು “ಪುತ್ತಿಲ ಪರಿವಾರ ಸೇವಾ ಟ್ರಸ್ಟ್”ನ  ವತಿಯಿಂದ ನೀಡಲಾಯಿತು.

ಟ್ರಸ್ಟ್‍ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ  “ಹಿಂದವಿ” ಕಚೇರಿ ಯಲ್ಲಿ ನೀಡಲಾಯಿತು.

ಈಗಾಗಲೇ ಪ್ರತೀ ತಿಂಗಳಿಗೆ 10,000 ರೂಪಾಯಿಯಂತೆ ಕಳೆದ 7 ತಿಂಗಳಿನಲ್ಲಿ  ರೂಪಾಯಿ 70,000 ಸಾವಿರ ಧನ ಸಹಾಯ ವನ್ನು ಅನಾರೋಗ್ಯದಲ್ಲಿರುವವರಿಗೆ  ವಿತರಣೆ ಮಾಡಲಾಗಿದೆ.





















































 
 
error: Content is protected !!
Scroll to Top