ದ.ಕ.ಜಿಲ್ಲೆಯಲ್ಲಿ  ಮರಳು ಸಮಸ್ಯೆ | ಸರಿಪಡಿಸುವಂತೆ ದ.ಕ.ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದಿಂದ ಉಸ್ತುವಾರಿ ಸಚಿವರಿಗೆ ಮನವಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಮರಳಿನ ಸಮಸ್ಯೆಯ ಬಗ್ಗೆ ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆದ ಗಣಿಗಾರಿಕೆ ಬಗೆಗಿನ ಸಭೆಯಲ್ಲಿ ದ.ಕ.ಜಿಲ್ಲಾ ಮರಳು ವ್ಯಾ ಪಾರಸ್ಥರ ಸಂಘದ ವತಿಯಿಂದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಹಾಗೂ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮನವಿ ಮಾಡಲಾಯಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿ ಸಚಿವರು ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘ ಮನವಿ ಕುರಿತು ಚರ್ಚಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ನಾನ್‌ ಸಿಆರ್‌ ಝಡ್ ಮರಳು ಗುತ್ತಿಗೆದಾರರ ಸಂಘದ ಅಧ್ಯಕ್ಷ ದಿನೇಶ್ ಮೆದು, ಕಾರ್ಯದರ್ಶಿ ಚಂದ್ರಹಾಸ್ ನಳ್ಳಿಪಾಡಿ, ಪದಾಧಿಕಾರಿಗಳಾದ ಸುರೇಶ್ ಕುಂಡಡ್ಕ, ಮೋನು ಪಿಲಿಗೂಡು, ಲತೀಪ್ ಅರಫಾ ಮತ್ತಿತರರು ಉಪಸ್ಥಿತರಿದ್ದರು





















































 
 
error: Content is protected !!
Scroll to Top