ಪುತ್ತೂರು: ಪುರುಷರಕಟ್ಟೆ ಮಾಯಂಗಲ ರಸ್ತೆಯ ಅಂಗನವಾಡಿಯೆದುರು ನಿಲ್ಲಿಸಿದ್ದ ಆಕ್ಟಿವಾ ಹೋಂಡಾ(ಕೆ.ಎ:21-ಇಡಿ 9849) ಕಳವಾದ ಬಗ್ಗೆ, ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಳ್ಳಿಗೆ ಗ್ರಾಮದ ಕೆಮ್ಮಾರ ಉಮೇಶ್ ಎಂಬವರು ಪುರುಷರಕಟ್ಟೆ ಮಾಯಂಗಲದಲ್ಲಿನ ಅಂಗನವಾಡಿಯ ಮುಂದುಗಡೆ ಕಡ್ಡಟದ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ತೆರಳುವಾಗ ಆಕ್ಟಿವಾ ಸ್ಟಾರ್ಟ್ ಆಗದ್ದರಿಂದ ಅಲ್ಲೇ ಬಿಟ್ಟು ಹೋಗಿದ್ದರು.
ಬೆಳಗ್ಗೆ ಬಂದಾಗ ಆಕ್ಟಿವಾ ಇಲ್ಲದಿರುವುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕಲಂ303(2) : 2023 5 ಪ್ರಕರಣ ದಾಖಲಿಸಿದ್ದಾರೆ.
























