ಪುತ್ತೂರು: ಪುತ್ತೂರು ಸೇರಿದಂತೆ ಕರಾವಳಿಯ ಹಲವೆಡೆಗಳಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗಿದ್ದು, ಕಾದು ಕೆಂಪಗಾಗಿದ್ದ ಕರಾವಳಿಗೆ ಮಳೆ ತುಸು ತಂಪೆರೆದಿದೆ.
ಪುಣಚ, ಕಬಕ, ನೇರಳಕಟ್ಟೆ ಮೊದಲಾದ ಪ್ರದೇಶಗಳಲ್ಲಿ ಮಳೆಯಾಗಿದೆ. ಬುಧವಾರ ಮಧ್ಯಾಹ್ನ ಮೋಡ ಮುಸುಕಿದ ವಾತಾವರಣವಿದ್ದು, ಗುಡುಗಿನ ಮಾರ್ದನಿಯೂ ಕೇಳಿಸುತ್ತಿತ್ತು.
ಮಳೆಯ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಸೂಚನೆ ನೀಡಿದ್ದು, ಮುಂದಿನ 5 ದಿನಗಳ ಕಾಲ ಮಳೆ ಬರಲಿದೆ ಎಂದು ವರದಿ ಮಾಡಿತ್ತು.
























