ಸುಳ್ಯದಲ್ಲಿ ಧೀಂಕಿಟ

ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಧೀಂಕಿಟ ಶಿರೋನಾಮೆಯಲ್ಲಿ ಒಂದು ದಿನದ ಅರೆಭಾಷೆ ಯಕ್ಷಗಾನ ತಾಳಮದ್ದಳೆ ಕಾರ್ಯಾಗಾರ ಉದ್ಘಾಟನೆಗೊಂಡಿತು.

ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಕೆ. ವಿ. ದಾಮೋದರ ಗೌಡರು ಮುಖ್ಯ ಅತಿಥಿಯಾಗಿದ್ದರು. ಕಲಾವಿದ ಜಬ್ಬಾರ್ ಸಮೋ ಮತ್ತು ಭಾಗವತಿಕೆ ಪ್ರತಿಭೆ ಭವ್ಯಶ್ರೀ ಕುಲ್ಕುಂದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಸದಾನಂದ ಮಾವಜಿಯವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಪ್ರೊ. ದಾಮೋದರ ಗೌಡರು ಅಕಾಡೆಮಿಯ ತ್ರೈಮಾಸಿಕ ಸಂಚಿಕೆ ”ಹಿಂಗಾರ ”ವನ್ನು ಬಿಡುಗಡೆಗೊಳಿಸಿ ಮಾತನಾಡಿ ಭಾಷೆಯನ್ನು ಬಳಸುವ ಮೂಲಕ ಬೆಳೆಸಬೇಕು ಎಂದರು. ಅಕಾಡೆಮಿ ಮಾಡಿದ ಕೆಲಸವನ್ನು ಶ್ಲಾಘಿಸಿದರು. ಭಾಷೆ ಸಹೋದರತೆ, ಸಮನ್ವಯತೆ, ಸಮಾನತೆಗಳನ್ನು ಉದ್ದೀಪಿಸಬೇಕು ಎಂದು ಅವರು ಪ್ರತಿಪಾದಿಸಿದರು ಕೆಲಸಗಳನ್ನು ವಿಷದಪಡಿಸಿ ಸರ್ವರ ಸಹಕಾರವನ್ನು ಕೋರಿದರು.





















































 
 

ಪ್ರೊ. ದಾಮೋದರ ಗೌಡರನ್ನು ಸನ್ಮಾನಿಸಿದ ಈ ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲು ನಿರೂಪಣೆ ಮತ್ತು ಧನ್ಯವಾದ ಸಮರ್ಪಣೆ, ರಂಗ ಮಯೂರಿ ಸಂಸ್ಥೆಯ ಮಾಲಕ ಮತ್ತು ಅಕಾಡೆಮಿ ಸದಸ್ಯರಾದ ಲೋಕೇಶ್ ಊರುಬೈಲು ಪ್ರಸ್ತಾವನೆ ಮತ್ತು ಸ್ವಾಗತಗಳನ್ನು ನಿರ್ವಹಿಸಿದರು. ಅಕಾಡೆಮಿಯ ಸದಸ್ಯರುಗಳಾದ ಜ್ಞಾನೇಶ್ ನಿಡ್ಯಮಲೆ, ಚಂದ್ರಾವತಿ ಬಡ್ಡಡ್ಕ, ತೇಜಕುಮಾರ್ ಬಡ್ಡಡ್ಕ ಮತ್ತು ಲತಾ ಪ್ರಸಾದ್ ಕುದುಪಾಜೆ ಸಹಕರಿಸಿದರು. ಸೀತಾರಾಮ ಕೇವಳ, ಶಶಿಧರ್ ಎಂ.ಜೆ., ಕಿಶೋರ್ ಕುಮಾರ್ ಕಿರ್ಲಾಯ, ವಿನುತಾ ಪಾತಿಕಲ್ಲು ಮತ್ತು ಹಲವಾರು ಕಲಾಸಕ್ತರ ಜೊತೆಗೆ ಅನೇಕ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

error: Content is protected !!
Scroll to Top