ಪ್ರಾಥಮಿಕ ತನಿಖಾ ವರದಿಯಲ್ಲಿದೆ ಬೆಚ್ಚಿಬೀಳಿಸುವ ಮಾಹಿತಿ
ನವದೆಹಲಿ : ಅಹಮದಾಬಾದ್‌ನಲ್ಲಿ ಕಳೆದ ಜೂನ್ 12ರಂದು ಏರ್ ಇಂಡಿಯಾ ವಿಮಾನ ಪತನಗೊಂಡ ಕಾರಣ ಬಹಿರಂಗವಾಗಿದೆ. ಈ ಭೀಕರ ಅಪಘಾತದ ಪ್ರಾಥಮಿಕ ತನಿಖಾ ವರದಿಯಲ್ಲಿ ವಿಮಾನ ಪತನವಗಾಲು ಕಾರಣವಾದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಸಲ್ಲಿಸಿರುವ 15 ಪುಟಗಳ ಪ್ರಾಥಮಿಕ ತನಿಖಾ ವರದಿಯಲ್ಲಿ ಹಲವು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ವರದಿಯ ಪ್ರಕಾರ, ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನದ ಎರಡೂ ಇಂಜಿನ್‌ಗಳು ಸ್ಥಗಿತಗೊಂಡವು. ಆ ನಂತರ ವಿಮಾನ ಪತನವಾಗಿದೆ.
ಟೇಕಾಫ್ ನಂತರ ಇಂಜಿನ್‌ಗಳ ಇಂಧನ ಸ್ವಿಚ್‌ಗಳು ಇದ್ದಕ್ಕಿದ್ದಂತೆ RUNನಿಂದ CUTOFFಗೆ ಬದಲಾದವು. ಈ ಘಟನೆ ಕೇವಲ 1 ಸೆಕೆಂಡ್ ಅಂತರದಲ್ಲಿ ಸಂಭವಿಸಿದೆ. ಈ ಸಮಯದಲ್ಲಿ ಇಂಜಿನ್‌ಗಳಿಗೆ ಇಂಧನ ಬರುವುದನ್ನು ನಿಂತುಹೋಗಿದೆ ಎಂದು ವರದಿ ತಿಳಿಸಿದೆ.
ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ನಡುವೆ ನಡೆದ ಸಂಭಾಷಣೆಯ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಪ್ರಕಾರ, ಒಬ್ಬ ಪೈಲಟ್ ಮತ್ತೊಬ್ಬ ಪೈಲಟ್ ಬಳಿ, ನೀವು ಇಂಜಿನ್ ಏಕೆ ಆಫ್ ಮಾಡಿದ್ದೀರಿ ಎಂದು ಕೇಳಿದ್ದಾರೆ. ಆಗ ಮತ್ತೊಬ್ಬ ಪೈಟಲ್, ನಾನು ಏನನ್ನೂ ಮಾಡಲಿಲ್ಲ ಎಂದು ಹೇಳಿದ್ದಾರೆ. ಇಬ್ಬರು ಪೈಲಟ್‌ಗಳ ನಡುವಿನ ಈ ಸಂಭಾಷಣೆ ಗಮನಿಸಿದರೆ ಯಾರೂ ಉದ್ದೇಶಪೂರ್ವಕವಾಗಿ ಇಂಧನ ಸ್ವಿಚ್ ಕಡಿತಗೊಳಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ತುರ್ತು ಪರಿಸ್ಥಿತಿ ಅರಿವಿಗೆ ಬರುತ್ತಿದ್ದಂತೆಯೇ ವಿಮಾನದ ಸ್ವಯಂಚಾಲಿತ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಪ್ರಯತ್ನಿಸಲಾಯಿತು. ಏರ್ ಟರ್ಬೈನ್ ಅಂದರೆ, ತುರ್ತು ಫ್ಯಾನ್ ಮತ್ತು ಎಪಿಯುನಂತಹ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿದ ನಂತರವೂ ವಿಮಾನವನ್ನು ರಕ್ಷಿಸಲು ಪೈಟಲ್ಗಳಿಗೆ ಸಾಧ್ಯವಾಗಲಿಲ್ಲ. ವಿಮಾನದ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಇದ್ದಾಗ ಮಾತ್ರ ಏರ್ ಟರ್ಬೈನ್ ಸಕ್ರಿಯವಾಗುತ್ತದೆ. ಇದರರ್ಥ ಇಂಜಿನ್ ಸ್ಥಗಿತಗೊಂಡಿದ್ದು ವಿಮಾನದ ವಿದ್ಯುತ್ ಪೂರೈಕೆ ಮೇಲೂ ಪರಿಣಾಮ ಬೀರಿತ್ತು.
ಎರಡೂ ಇಂಜಿನ್‌ಗಳು ಅಥವಾ ವಿದ್ಯುತ್ ಸರಬರಾಜು ನಿಂತಾಗ ಅಥವಾ ಹೈಡ್ರಾಲಿಕ್ ವೈಫಲ್ಯ ಉಂಟಾದಾಗ ರಾಮ್ ಏರ್ ಟರ್ಬೈನ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ. ಇದು ವಿಮಾನ ಎತ್ತರವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಇದು ವಿದ್ಯುತ್ ಉತ್ಪಾದಿಸಲು ಗಾಳಿಯ ವೇಗವನ್ನು ಬಳಸುತ್ತದೆ.
ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಕೆಲವೇ ನಿಮಿಷಗಳಲ್ಲಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಆವರಣಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ 241 ಪ್ರಯಾಣಿಕರು ಸೇರಿದಂತೆ 275 ಜನರು ಸಾವನ್ನಪ್ಪಿದ್ದರು.
























