ಬೌದ್ಧ ಮಠದ ಮೇಲೆ ಬಾಂಬ್‌ ದಾಳಿ : 30 ಮಂದಿ ಸಾವು

ಜನರು ಆಶ್ರಯಪಡೆದಿದ್ದ ಮಠದ ಮೇಲೆ ಬಾಂಬ್‌ ದಾಳಿ

ನೇಪಿಡಾವ್: ಮ್ಯಾನ್ಮಾರ್‌ನ ಮಧ್ಯ ಸಾಗೈಂಗ್ ಪ್ರದೇಶದ ಬೌದ್ಧ ಮಠವೊಂದರ ಮೇಲೆ ನಡೆದ ವೈಮಾನಿಕ ಬಾಂಬ್‌ ದಾಳಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ 10 ಜನರ ಸ್ಥಿತಿ ಗಂಭೀರವಾಗಿದೆ ಎಂದು ಪ್ರತಿರೋಧ ಗುಂಪಿನ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಪ್ರದೇಶದ ಹತ್ತಿರದ ಹಳ್ಳಿಗಳ 150ಕ್ಕೂ ಹೆಚ್ಚು ಜನರು ಆಶ್ರಯ ಪಡೆಯುತ್ತಿದ್ದ ಗ್ರಾಮದ ಮಠದ ಕಟ್ಟಡದ ಮೇಲೆ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಜೆಟ್ ಫೈಟರ್ ಬಾಂಬ್ ದಾಳಿ ನಡೆಸಲಾಗಿದೆ. ನಾಲ್ಕು ಮಕ್ಕಳು ಸೇರಿದಂತೆ 30 ನಾಗರಿಕರು ಸಾವನ್ನಪ್ಪಿದ್ದಾರೆ.





















































 
 

ಮ್ಯಾನ್ಮಾರ್‌ನ ಸ್ವತಂತ್ರ ಡೆಮಾಕ್ರಟಿಕ್ ವಾಯ್ಸ್ ಆಫ್ ಬರ್ಮಾ ಆನ್‌ಲೈನ್ ಮಾಧ್ಯಮ ಸಾವಿನ ಸಂಖ್ಯೆ 30 ಇರಬಹುದು ಎಂದು ವರದಿ ಮಾಡಿದೆ. ಅದನ್ನು ತಕ್ಷಣಕ್ಕೆ ದೃಢಪಡಿಸಲು ಸಾಧ್ಯವಿಲ್ಲ. ದೇಶದ ಎರಡನೇ ಅತಿದೊಡ್ಡ ನಗರವಾದ ಮಂಡಲೆಯಿಂದ ವಾಯುವ್ಯಕ್ಕೆ ಸುಮಾರು 35 ಕಿ.ಮೀ ದೂರದಲ್ಲಿರುವ ಮಠದಲ್ಲಿ ನಡೆದ ಘಟನೆಯ ಬಗ್ಗೆ ಸೇನೆಯು ತಕ್ಷಣ ಪ್ರತಿಕ್ರಿಯಿಸಲಿಲ್ಲ.

2021ರ ಫೆಬ್ರವರಿಯಲ್ಲಿ ಆಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರದಿಂದ ಸೇನೆಯು ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಮ್ಯಾನ್ಮಾರ್ ಪ್ರಕ್ಷುಬ್ಧಗೊಂಡಿದೆ. ಬಳಿಕ ಮ್ಯಾನ್ಮಾರ್‌ನಲ್ಲಿ ಅಂತರ್‌ ಕಲಹ ಪ್ರಾರಂಭವಾಗಿದೆ.

error: Content is protected !!
Scroll to Top