ರೇಣುಕಾಸ್ವಾಮಿ ಕೊಲೆ ಆರೋಪದ ಕಾರಣಕ್ಕೆ ವಿಸಾ ತಿರಸ್ಕರಿಸಿದ ಅಧಿಕಾರಿಗಳು
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟ ದರ್ಶನ್ಗೆ ಒಂದರ ಮೇಲೆ ಮತ್ತೊಂದು ಸಮಸ್ಯೆಗಳು ಬಂದೊದಗುತ್ತಿದೆ.
ಡೆವಿಲ್ ಚಿತ್ರೀಕರಣದ ಕಾರಣಕ್ಕಾಗಿ ದರ್ಶನ್ ಸ್ವಿಟ್ಜರ್ಲ್ಯಾಂಡ್ ಪ್ರಯಾಣಕ್ಕೆ ವಿಸಾ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ಥಳೀಯ ಅಧಿಕಾರಿಗಳು ತಿರಸ್ಕರಿಸಿದ್ದು, ಇದು ಚಿತ್ರತಂಡಕ್ಕೆ ಹಿನ್ನಡೆಯಾಗುವಂತೆ ಮಾಡಿದೆ.
ದರ್ಶನ್ ಮೇಲಿನ ಕೊಲೆ ಆರೋಪದ ಕಾರಣಕ್ಕೆ ಸ್ವಿಟ್ಜರ್ಲ್ಯಾಂಡ್ ಅಧಿಕಾರಿಗಳು ವಿಸಾ ನಿರಾಕರಿಸಿದ್ದು, ಇದರಿಂದಾಗಿ ಚಿತ್ರತಂಡಕ್ಕೆ ಸಮಸ್ಯೆಯಾಗಿದೆ.
ದರ್ಶನ್ಗೆ ಜುಲೈ 11 ರಿಂದ 30 ರ ವರೆಗೆ ಷರತ್ತಿನ ಮೇಲೆ ಥಾಯ್ಲೆಂಡ್ಗೆ ತೆರಳಲು ಬೆಂಗಳೂರಿನ 57 ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಅವಕಾಶ ನೀಡಿತ್ತು. ಆದರೆ ಪ್ರಯಾಣದ ದಿನಾಂಕ, ಸ್ಥಳ, ಕಾರ್ಯಚಟುವಟಿಕೆಗಳ ಮಾಹಿತಿಯನ್ನು ನೀಡುವಂತೆಯೂ ಸೂಚಿಸಿತ್ತು.
























