ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಗುರುಪೂರ್ಣಿಮೆ ಆಚರಣೆ

ಪುತ್ತೂರು: ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಗುರುಪೂರ್ಣಿಮೆಯನ್ನು ಗುರುವಾರ ಆಚರಿಸಲಾಯಿತು.

ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಮಾತನಾಡಿ, ನಮಗೆ ದಾರಿ ತೋರಿಸುವವರು ಹಾಗೂ ನಮ್ಮ ತಪ್ಪುಗಳನ್ನು ತಿದ್ದಿ ಸರಿಯಾದ ದಾರಿಗೆ ಕರೆದುಕೊಂಡು ಹೋಗುವವರು ಗುರು, ಅದಕ್ಕಾಗಿ ಗುರುಹಿರಿಯರಿಗೆ ಗೌರವ ಕೊಟ್ಟು ಸನ್ಮಾರ್ಗದಲ್ಲಿ ನಡೆಯಿರಿ ಎಂದರು.

ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ, ಗುರು ಎಂದರೆ ಜ್ಞಾನ. ಜ್ಞಾನ ಎಂದರೆ ಬೆಳಕು. ಮನಸ್ಸಿನ ಕಲ್ಮಶವನ್ನು ತೆಗೆದಾಗ ಜ್ಞಾನವನ್ನು ಪಡೆಯಲು ಸಾಧ್ಯ ಜೀವನದಲ್ಲಿ ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುತ್ತಾ ಸ್ಪೂರ್ತಿಯ ಮಾತುಗಳನ್ನಾಡಿ ಗುರುಪೂರ್ಣಿಮೆಯ ಶುಭಾಶಯ ತಿಳಿಸಿದರು.





















































 
 

ಮುಖ್ಯ ಶಿಕ್ಷಕ ಪ್ರಸನ್ನ ಕೆ., ಶಿಕ್ಷಕ- ಶಿಕ್ಷಕೇತರ ವೃoದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಳಿಕ ಜಗದ್ಗುರುಗಳಾದ ಶ್ರೀ ವೇದವ್ಯಾಸ ಮಹರ್ಷಿಗಳ ಭಾವಚಿತ್ರಕ್ಕೆ ಎಲ್ಲರಿಂದ ಪುಷ್ಪಾರ್ಚನೆ ಗಯ್ಯಲಾಯಿತು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಉಷಾ ಸ್ವಾಗತಿಸಿದರು. ಭವಿತಾ ವಂದಿಸಿದರು.

error: Content is protected !!
Scroll to Top