ಗುರುಪೂರ್ಣಿಮೆ ದಿನ ಡಾ. ಕೆ.ಜಿ. ಭಟ್ ಹಾಗೂ ಶಿಕ್ಷಕರಿಗೆ ಗೌರವ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು: ಗುರುಪೂರ್ಣಿಮೆಯ ಪವಿತ್ರ ದಿನದಂದು ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು “ಗುರು” ಪರಂಪರೆಯ ಘನತೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಅವರು ಮೊದಲು ಪುತ್ತೂರಿನ ನೆಕ್ಕಿಲಾಡಿಯಲ್ಲಿರುವ “ಬಲ್ಲಿ ಆಯುರ್‌ಗ್ರಾಮ” ಆಯುರ್ವೇದ ಪುನಶ್ಚೇತನ ಕೇಂದ್ರಕ್ಕೆ ಭೇಟಿ ನೀಡಿದರು. ಈ ಕೇಂದ್ರವನ್ನು ಸ್ಥಾಪಿಸಿರುವ ಸುಪ್ರೀತ್ ಲೋಬೋ ಅವರ ಮಾದರಿಯಾದ ಸೇವಾ ಮನೋಭಾವನೆಗೆ ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ 91 ವರ್ಷದ ಹಿರಿಯ ವೈದ್ಯರಾದ ಡಾ. ಕೆ.ಜಿ. ಭಟ್ ಉಪ್ಪಿನಂಗಡಿ ಅವರನ್ನು ಗೌರವಿಸಲಾಯಿತು. ಇವರು ದಶಕಗಳ ಕಾಲ ಗ್ರಾಮೀಣ ಜನರಿಗಾಗಿ ನಿಷ್ಕಪಟ ವೈದ್ಯಕೀಯ ಸೇವೆ ಸಲ್ಲಿಸುತ್ತಾ, ಮಾನವೀಯತೆ ಮತ್ತು ವೈದ್ಯನೈಪುಣ್ಯದ ಮಾದರಿಯಾಗಿ ಗುರುತಿಸಿಕೊಂಡಿದ್ದಾರೆ. ಅವರನ್ನು ಭೇಟಿಯಾಗಿ, ಅವರ ಆರೋಗ್ಯ ವಿಚಾರಿಸಿ, ಅವರ ಜೀವನಪಾಠಗಳು ಇಂದು ಸಮಾಜಕ್ಕೆ ಬೇಕಾದ ಸಂಸ್ಕಾರ ಎಂದು ಕಿಶೋರ್ ಕುಮಾರ್ ಹೇಳಿದರು.





















































 
 

ಬಳಿಕ ಕಿಶೋರ್ ಕುಮಾರ್ ಅವರು ತಮ್ಮ ಬಾಲ್ಯದ ಗುರುಗಳಾದ ಶ್ರೀನಿವಾಸ್ ಬಿ.ಎಸ್ ಮತ್ತು ಅವರ ಧರ್ಮಪತ್ನಿ ಹಾಗೂ ಗಣಿತ ಶಿಕ್ಷಕಿ ಜಯಶ್ರೀ ಅವರನ್ನು ಭೇಟಿಯಾಗಿ, ಅವರ ಆಶೀರ್ವಾದ ಪಡೆದರು. ವಿದ್ಯೆ, ಮೌಲ್ಯಗಳು ಹಾಗೂ ಶಿಸ್ತನ್ನು ತೋರಿಸಿದ್ದ ಇವರಿಗೆ ಗುರುಪೂರ್ಣಿಮೆಯ ಈ ಶುಭದಿನದಲ್ಲಿ ಶಿಷ್ಯನಾಗಿ ಗೌರವ ಸಲ್ಲಿಸಿದರು.

ಕಾರ್ಯಕ್ರಮಗಳಲ್ಲಿ ಬಿಜೆಪಿ ಪುತ್ತೂರು ಮಂಡಲದ ಅಧ್ಯಕ್ಷ ದಯಾನಂದ ಉಜಿರುಮಾರು, ನಗರಾಧ್ಯಕ್ಷ ಶಿವಕುಮಾರ್ ಟಿ.ಬಿ, ಉಪಾಧ್ಯಕ್ಷ ಸುನೀಲ್ ದಡ್ಡು, ನಗರ ಮಂಡಲದ ಉಪಾಧ್ಯಕ್ಷ ಶಶಿಧರ್ ನಾಯ್ಕ್, ಶಕ್ತಿ ಕೇಂದ್ರದ ಪ್ರಮುಖರಾದ ನಾಗೇಂದ್ರ ಬಾಳಿಗ, ಪ್ರತೀಕ್ ಶೆಟ್ಟಿ ಮತ್ತು ಸೃಜನ್ ಶೆಟ್ಟಿ, ಗ್ರಾಮಾಂತರ ನಾಯಕರಾದ ಮಣಿಕಂಠ ಹಾಗೂ ದಯಾನಂದ ಮುಂತಾದವರು ಉಪಸ್ಥಿತರಿದ್ದರು.

error: Content is protected !!
Scroll to Top