ಯೆಮನ್: ನಿಮಿಷಾ ಪ್ರಿಯ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ಸನಾ: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಯೆಮನ್‌ನಲ್ಲಿ ಜುಲೈ 16 ರಂದು ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ಪಾಲಕ್ಕಾಡ್‌ನ ನರ್ಸ್ ನಿಮಿಷಾ ಪ್ರಿಯಾ ಅವರ ಪ್ರಕರಣಕ್ಕೆ ಸಂಬಂಧಿಸಿ ಕೊನೆಯ ಕ್ಷಣದಲ್ಲಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ.

ನಿಮಿಷಾ ಪ್ರಿಯ ಅವರ ಮರಣದಂಡನೆಯನ್ನು ತಡೆಯಲು ಕೋರಿ ಈ ಅರ್ಜಿ ಸಲ್ಲಿಸಲಾಗಿದ್ದು, ಇದರ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿರುವುದಾಗಿದೆ.

ಈ ಅರ್ಜಿಯನ್ನು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿರುವ ನ್ಯಾಯ ಪೀಠ ನಾಳೆ ವಿಚಾರಣೆ ನಡೆಸಲು ನಿರ್ಧರಿಸಿದೆ.





















































 
 

ಜುಲೈ 14 ರಂದು ಈ ಪ್ರಕರಣದ ವಿಚಾರಣೆಗೆ ಕೋರ್ಟ್ ದಿನ ನಿಗದಿ ಮಾಡಿತ್ತು. ಆದರೆ ಆ ಬಳಿಕ ಮರಣ ದಂಡನೆಗೆ ಕೇವಲ ಎರಡೇ ದಿನ ಇದ್ದು ಇದರಿಂದಾಗಿ ಭಾರತದ ರಾಜತಾಂತ್ರಿಕ ಮಾತುಕತೆಗೆ ಹಿನ್ನಡೆಯಾಗಬಹುದು, ಅದು ಪರಿಣಾಮಕಾರಿಯಾಗದೇ ಇರಬಹುದು ಎಂದು ಹಿರಿಯ ವಕೀಲ ರಾಜೇಸ್ ಬಸಂತ್ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಪ್ರಸ್ತುತ ನಿಮಿಷಾ ಅವರು ಸನಾದಲ್ಲಿರುವ ಜೈಲಿನಲ್ಲಿ ಇದ್ದಾರೆ.

error: Content is protected !!
Scroll to Top