ದಸರಾ ಏರ್ ಶೋ‌ಗೆ ರಕ್ಷಣಾ ಸಚಿವರಿಂದ ಹಸಿರು ನಿಶಾನೆ

ಬೆಂಗಳೂರು: ನಾಡ ಹಬ್ಬ ದಸರಾದಲ್ಲಿ ಏರ್ ಶೋ‌ ನಡೆಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು ಸಕಾರಾತ್ಮಕವಾಗಿ ‌ಸ್ವಂದಿಸಿದ್ದು, ಒಪ್ಪಿಗೆ ಸೂಚಿಸಿದ್ದಾರೆ.

ಸಿ ಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ಅವರು ಕೇಂದ್ರ ರಕ್ಷಣಾ ಸಚಿವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ರಕ್ಷಣಾ ವಿಚಾರಗಳಿಗೆ ಸಂಬಂಧಿಸಿದ ಹಾಗೆ ಚರ್ಚೆ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ವಿಶ್ವವಿಖ್ಯಾತ ದಸರಾ ಹಬ್ಬದ ಸಂದರ್ಭದಲ್ಲಿ ಏರ್ ಶೋ ನಡೆಸುವುದಕ್ಕೆ ಅನುಮತಿ ಕೋರಲಾಗಿದ್ದು, ಇದಕ್ಕೆ ರಕ್ಷಣಾ ಸಚಿವರು ಹಸಿರು ನಿಶಾನೆ ನೀಡಿದ್ದಾರೆ.





















































 
 

error: Content is protected !!
Scroll to Top