ಸುಳ್ಯ : ಗ್ರಾಪಂನ ಘನ ತ್ಯಾಜ್ಯ ಘಟಕ ಬೆಂಕಿಗಾಹುತಿ

ಸುಳ್ಯ: ಅರಂತೋಡು ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಘಟಕ ಹೊತ್ತಿ ಉರಿದಿದೆ. ಬುಧವಾರ ಸಂಜೆ ಘಟನೆ ನಡೆದಿದೆ.

ಘಟಕದಲ್ಲಿ ತ್ಯಾಜ್ಯ ಪೂರ್ತಿಯಾಗಿ ಬೇರ್ಪಡಿಸಿ ತುಂಬಿಡಲಾಗಿತ್ತು. ಬೆಂಕಿ ತಗುಲಿ ಈ ತ್ಯಾಜ್ಯ ಹೊತ್ತಿ ಉರಿದಿದೆ. ಕಟ್ಟಡ ಮತ್ತಿತರ ವಸ್ತುಗಳಿಗೆ ಸೇರಿ ಅಪಾರ ಹಾನಿ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದರು. ಘಟನೆಯಲ್ಲಿ ಘನತ್ಯಾಜ್ಯ ಸಂಪೂರ್ಣ ಹೊತ್ತಿ ಉರಿದಿದೆ. ಘನತ್ಯಾಜ್ಯ ವಿಲೇವಾರಿ ಮಾಡುವ ನಾಲ್ಕು ಲಕ್ಷ ಮೌಲ್ಯದ ಯಂತ್ರ ಸೇರಿ ಇತರ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ.

error: Content is protected !!
Scroll to Top