ಬಿಸಿಯೂಟ ಅಡುಗೆಯವರಿಂದ ಪುತ್ತೂರಲ್ಲಿ ಪ್ರತಿಭಟನೆ | ವೇತನ ಏರಿಕೆಗೆ ಆಗ್ರಹ

ಪುತ್ತೂರು: ಸರಕಾರ ಏನೂ ಮಾಡಿದರೂ ನಾವು ಒಪ್ಪಿಕೊಂಡು ಬದುಕಬೇಕು. ಮಾಲಕರ ವರ್ಗದ ಗುಲಾಮರಂತೆ ಬದುಕಬೇಕು ಎಂದು ಸರಕಾರದ ಕರ್ಪೋರೇಟು ಕಂಪೆನಿಗಳ ಹಿತರಕ್ಷಕರಾಗಿ 4 ಕಾರ್ಮಿಕ ಸಂಹಿತೆಗಳನ್ನು ಜಾರಿ ಗೊಳಿಸಲು ನಿರ್ಧರಿಸಿರುವುದು ಖಂಡನೀಯ ಎಂದು ಸಿಐಟಿಯು ಜಿಲ್ಲಾ ಮುಖಂಡೆ ಈಶ್ವರಿ ಶಂಕರ್ ಹೇಳಿದರು.

ಕಾರ್ಮಿಕ ಸಂಘಗಳ ಒಕ್ಕೂಟ ಜೆಸಿಟಿಯು ಮತ್ತು ರೈತ ಸಂಘಟನೆಗಳ ಒಕ್ಕೂಟ ಎಸ್.ಕೆ.ಎಂ. ಜಂಟಿ ಆಶ್ರಯದಲ್ಲಿ ನಡೆದ ಅಖಿಲ ಭಾರತ ಮುಷ್ಕರದ ಭಾಗವಾಗಿ ಪುತ್ತೂರು, ಸುಳ್ಯ, ಕಡಬ ತಾಲೂಕಿನ ಅಕ್ಷರ ದಾಸೋಹ ನೌಕರರು ಅಡುಗೆ ಬಂದ್ ಮಾಡಿ ಪುತ್ತೂರು ಎ.ಸಿ. ಕಚೇರಿ ಎದುರು ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತಾನಾಡಿದರು.

ವೇತನವನ್ನು ಮಾಸಿಕ 26 ಸಾವಿರಕ್ಕೆ ಏರಿಸಬೇಕು, ಪ್ರತಿ ಶಾಲೆಯಲ್ಲೂ ಕನಿಷ್ಟ ಇಬ್ಬರು ಅಡುಗೆಯವರು ಇರಬೇಕು, ಮಕ್ಕಳ ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯಬಾರದು ಮೊದಲಾದ ಪ್ರಮುಖ ಬೇಡಿಕೆಗಳನ್ನೂ ಮುಂದಿಟ್ಟುಕಾರ್ಮಿಕ ಸಂಹಿತೆಗಳನ್ನು ತಿರಸ್ಕರಿಸಲು ಆಗ್ರಹಿಸಿ ಈ ಪ್ರತಿಭಟನೆ ನಡೆಯಿತು.





















































 
 

ನಮಗೆ ಈಗ ನೀಡುವ ಮಾಸಿಕ 4600 ರೂ. ಸಂಬಳ ಕೂಡಾ ಅಕ್ಷರ ದಾಸೋಹ ನೌಕರರು ಹೋರಾಟ ನಡೆಸಿಯೇ ಪಡಕೊಂಡ ಸಂಬಳವಾಗಿದೆ. ಅದರಲ್ಲಿ ಒಂದು ಸಾವಿರ ಇನ್ನೂ ಜಾರಿಯಾಗಿಲ್ಲ. ಹತ್ತಿರದ ಕೇರಳದ ಎಡರಂಗ ಸರಕಾರ ಬಿಸಿಯೂಟ ಕೆಲಸಗಾರರಿಗೆ ಮಾಸಿಕ 13 ಸಾವಿರ ರೂ. ಸಂಬಳ ನೀಡುತ್ತಿದೆ. ಆದರೆ ಇಲ್ಲಿ ಬಿಜೆಪಿ ಆಡಳಿತ ಇದ್ದರೂ, ಕಾಂಗ್ರೇಸ್ ಆಡಳಿತ ಇದ್ದರೂ ನಮ್ಮ ಸಂಬಳದ ಬಗ್ಗೆ, ನಮ್ಮ ಸಂಕಷ್ಟದ ಬಗ್ಗೆ ಅರ್ಥಮಾಡಿಕೊಳ್ಳುವ ಗುಣ ಇಲ್ಲದ ಸರಕಾರ ಇರುವುದಾಗಿದೆ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಶ್ಯಾಮರಾಜ್‌ ಪಟ್ರಮೆ ಮಾತನಾಡಿ, ನಮ್ಮ ಅಖಿಲ ಭಾರತ ಮುಷ್ಕರವನ್ನು ಜಗತ್ತಿನ ಎಲ್ಲಾ ಶ್ರೀಮಂತ ರಾಷ್ಟ್ರಗಳು ಕಣ್ಣು ಬಾಯಿ ಬಿಟ್ಟು ನೋಡುತ್ತಿವೆ. ಇಲ್ಲಿ ಪುತ್ತೂರಲ್ಲೂಈ ಮುಷ್ಕರವನ್ನುಅವರು ಕಣ್ಣು ಬಿಟ್ಟು ನೋಡುವಂತೆ ಮಾಡಲು ದೊಡ್ಡ ಸಂಖ್ಯೆಯಲ್ಲಿ ಸೇರಿದ ನಿಮಗೆ ಮೊದಲ ಅಭಿನಂದನೆ ಎಂದರು. ಯಾಕೆಂದರೆ ಅವರಿಗೆ ಈ ಕಾರ್ಮಿಕ ವರ್ಗದ ಮುಷ್ಕರ ಶೋಷಕ ವರ್ಗಕ್ಕೆ, ನಮ್ಮನ್ನು ಲೂಟಿ ಮಾಡುವ ವರ್ಗಕ್ಕೆಅಸಹ್ಯವಾಗಿ ಕಾಣುತ್ತದೆ ಮತ್ತು ಕಿರಿಕಿರಿ ಉಂಟು ಮಾಡುತ್ತದೆ. ನಾವು ದುಡಿಯುವ ಜನ ಸಂಕಷ್ಟದಿಂದ ಜೀವನ ಸಾಗಿಸುವ ಸಂಕಷ್ಟಮಯ ನೋವನ್ನುಒಮ್ಮೆಕೇಂದ್ರ ಸರಕಾರ ಮತ್ತುರಾಜ್ಯ ಸರಕಾರಗಳು ಕಣ್ಣು ಬಿಟ್ಟು ನೋಡಿಯಾದರೂ ನಮ್ಮ ಪರವಾಗಿ ಏನಾದರೂ ಮಾಡಿ ನಮ್ಮ ಬದುಕನ್ನು ಹಸನುಗೊಳಿಸಲಿ ಎಂದು ಎಚ್ಚರಿಸುವ ಕಾರ್ಯಕ್ರಮವೇ ಈ ಅಖಿಲ ಭಾರತ ಮುಷ್ಕರದ ಉದ್ದೇಶ ಎಂದರು.

ಡಿ.ವೈ.ಎಫ್.ಐ. ಮುಖಂಡ ಅಭಿಷೇಕ್‌ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ರಂಜಿತ ವಂದಿಸಿದರು. ಸಂಘದ ಪುತ್ತೂರು ತಾಲೂಕು ಅಧ್ಯಕ್ಷೆ ರಂಜಿತ, ಕಾರ್ಯದರ್ಶಿ ಲತಾ, ಖಜಾಂಜಿ ತೆರೆಸಾ, ಸುಳ್ಯ ಅಧ್ಯಕ್ಷ ವಿಜಯಲಕ್ಷ್ಮಿ, ಸುಳ್ಯ ಮುಖಂಡರುಗಳಾದ ಭವ್ಯ, ಸಾವಿತ್ರಿ ಹಾಗೂ ಕಡಬ ತಾಲೂಕು ಅಧ್ಯಕ್ಷೆ ರೇವತಿ, ಕಾರ್ಯದರ್ಶಿ ಸುಲೋಚನ, ಖಜಾಂಜಿ ಹೇಮಲತ, ವೇದಾ, ಸುದಾ, ಲೀಲಾವತಿ ಮೊದಲಾದವರು ಪಾಲ್ಗೊಂಡಿದ್ದರು.

error: Content is protected !!
Scroll to Top