ಭಾರತ ರಫೇಲ್‌ಗೆ ಸಂಬಂಧಿಸಿದಂತೆ ಸುಳ್ಳು ಹೇಳಿದ ಪಾಕಿಸ್ತಾನಕ್ಕೆ ಮುಖಭಂಗ | ಆಪರೇಷನ್ ಸಿಂಧೂರ್ ವೇಳೆ ಭಾರತದ ರಫೇಲ್ ಅನ್ನು ನಾಶ ಮಾಡಿದ್ದಾಗಿ ‌ಸುಳ್ಳು ಹೇಳಿದ್ದ ಪಾಕಿಸ್ತಾನ

ನವದೆಹಲಿ: ಪಾಕಿಸ್ತಾನವು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಭಾರತದ ರಫೇಲ್ ಯುದ್ಧ ವಿಮಾನವನ್ನು ಹೊಡೆದು ಹಾಕಿದ್ದೇವೆ ಎಂದು ಹೇಳಿರುವುದು ‌ಸತ್ಯಕ್ಕೆ ದೂರವಾದ ಸಂಗತಿ ಎಂದು ಫ್ರಾನ್ಸ್‌‌‌ನ ಡಸಾಲ್ಟ್ ಏವಿಯೇಷನ್ ಕಂಪನಿ ಬಹಿರಂಗಪಡಿಸಿದೆ.

ಭಾರತವು ಒಂದು ರಫೇಲ್ ವಿಮಾನವನ್ನು ಕಳೆದುಕೊಂಡಿರುವುದು ‌ಸತ್ಯ. ಆದರೆ ಅದು ತಾಂತ್ರಿಕ ಕಾರಣಗಳಿಂದಾಗಿ ಸಂಭವಿಸಿದ ಘಟನೆ. ಹೊರತಾಗಿ ಪಾಕಿಸ್ತಾನ ಹೊಡೆದುರುಳಿಸಿರುವುದಲ್ಲ ಎನ್ನುವ ಮೂಲಕ ಪಾಕಿಸ್ತಾನಕ್ಕೆ ಛಾಟಿಯೇಟು ನೀಡಿದೆ.

ಆಪರೇಷನ್ ಸಿಂಧೂರದ ಸಮಯದಲ್ಲಿ ಭಾರತಕ್ಕೆ ಸೇರಿದ ಮೂರು ರಫೇಲ್‌ಗಳನ್ನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಸುಳ್ಳು ಹೇಳಿಕೆ ನೀಡಿತ್ತು. ಇದರ ಸತ್ಯಾಸತ್ಯತೆಯ ಬಗ್ಗೆ ರಫೇಲ್ ವಿಮಾನ ತಯಾರಕ ಡಸಾಲ್ಟ್ ಏವಿಯೇಷನ್ ಸಂಸ್ಥೆಯ ಸಿಇಒ ಸ್ಪಷ್ಟನೆ ನೀಡಿರುವುದಾಗಿದೆ. ನಿಗದಿತ ಮಿತಿಗಿಂತ ಎತ್ತರದಲ್ಲಿ ರಫೇಲ್ ಹಾರಾಟ ನಡೆಸಿದ ಕಾರಣದಿಂದ ತಾಂತ್ರಿಕ ದೋಷ ಕಾಣಿಸಿಕೊಂಡು ಭಾರತದ ಒಂದು ರಫೇಲ್ ನಾಶವಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.





















































 
 

ಈ ಸ್ಪಷ್ಟನೆ ಪಾಕಿಸ್ತಾನದ ಜೊತೆ ಭಾರತ ವಿರೋಧಿಗಳಿಗೂ ಮುಖಭಂಗವಾಗುವಂತೆ ಮಾಡಿದೆ.

error: Content is protected !!
Scroll to Top