ಸೇತುವೆ ಕುಸಿದು ನದಿಗೆ ಬಿದ್ದ ನಾಲ್ಕು ವಾಹನಗಳು : ಮೂರು ಮಂದಿ ಸಾವು

ಅಂಚಿನ ತನಕ ಬಂದು ಪವಾಡಸದೃಶವಾಗಿ ಪಾರಾದ ಬೃಹತ್‌ ಟ್ಯಾಂಕರ್‌

ಅಹಮದಾಬಾದ್: ಗುಜರಾತ್‌ ವಡೋದರಾದ ಪದ್ರಾ ತಾಲೂಕಿನ ಮುಜ್ಪುರ ಬಳಿ ಹಳೇ ಸೇತುವೆ ಕುಸಿದ ಪರಿಣಾಮ ಅದರ ಮೇಲೆ ಸಂಚರಿಸುತ್ತಿದ್ದ ನಾಲ್ಕು ವಾಹನಗಳು ನದಿಗೆ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 7.45ರ ಸುಮಾರಿಗೆ ಸೇತುವೆ ಕುಸಿದಿದೆ. ಈ ಸೇತುವೆ ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು.

ಎರಡು ಟ್ರಕ್‌ಗಳು, ಒಂದು ಪಿಕಪ್ ವ್ಯಾನ್ ಮತ್ತು ಇನ್ನೊಂದು ವಾಹನ ಕೆಳಗೆ ಬಿದ್ದಿದೆ. ವಾಹನಗಳಿಂದ ಮೂವರನ್ನು ರಕ್ಷಿಸಲಾಗಿದ್ದು ಮೂವರು ಮೃತಪಟ್ಟಿದ್ದಾರೆ.





















































 
 

ಸೇತುವೆ ಅಂಚಿನ ತನಕ ಸಾಗಿಬಂದ ಭಾರಿ ಗಾತ್ರದ ಟ್ಯಾಂಕರೊಂದು ಕುಸಿದ ಸ್ಥಳದಲ್ಲಿ ಕೂಡಲೆಳೆ ಅಂತರದಲ್ಲಿ ನಿಂತಿರುವ ವಿಡಿಯೋ ಬಹಳ ವೈರಲ್‌ ಆಗಿದೆ. ಅನೇಕರು ಟ್ಯಾಂಕರ್‌ ಚಾಲಕನ ಧೈರ್ಯವನ್ನು ಮೆಚ್ಚಿದ್ದಾರೆ.

ಘಾಂಬೀರ ಎಂದು ಹೆಸರಿರುವ ಈ 45 ವರ್ಷದ ಹಳೆಯ ಸೇತುವೆ ಇದಾಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿತ್ತು. ಅದರ ಶಿಥಿಲಾವಸ್ಥೆಯ ಬಗ್ಗೆ ಸ್ಥಳೀಯರು ಪದೇಪದೆ ಎಚ್ಚರಿಕೆ ನೀಡುತ್ತಿದ್ದರು. ತುರ್ತು ದುರಸ್ತಿ ಅಥವಾ ಹೊಸ ರಚನೆಗಾಗಿ ಮನವಿ ಮಾಡಿದ್ದರು.

error: Content is protected !!
Scroll to Top