ಮಡಪ್ಪಾಡಿಗೆ ಕೊನೆಗೂ ಸಿಕ್ಕಿತು ಸರ್ಕಾರಿ ಹಾಲ್ಟ್ ಬಸ್ ಸೇವೆ

ಊರವರ ಬಹುಕಾಲದ ಬೇಡಿಕೆ ಈಡೇರಿಕೆ ; ಬಸ್‌ಗೆ ಸಂಭ್ರಮದ ಸ್ವಾಗತ

ಸುಳ್ಯ: ತಾಲೂಕಿನ ಮಡಪ್ಪಾಡಿಯಲ್ಲಿ ರಾತ್ರಿ ಹಾಲ್ಟ್‌ ಆಗುವ ಸರ್ಕಾರಿ ಬಸ್‌ ಸೇವೆ ಆರಂಭವಾಗಿದ್ದು, ಈ ಮೂಲಕ ಗ್ರಾಮಸ್ಥರ ಬಹುಕಾಲದ ಬೇಡಿಕೆ ಈಡೇರಿದೆ. 2019-20ರಲ್ಲಿ ಕೊರೋನ ಸಾಂಕ್ರಾಮಿಕ ಬಾಧಿಸಿದ ಸಂದರ್ಭ ಸ್ಥಗಿತಗೊಂಡಿದ್ದ ಮಡಪ್ಪಾಡಿಯ ಸರಕಾರಿ ಬಸ್ ಇದೀಗ ಪುನರಾರಂಭಗೊಂಡಿದೆ.

ಮಡಪ್ಪಾಡಿ ಸುಮಾರು 1600 ಜನಸಂಖ್ಯೆ ಇರುವ ಈ ಊರು. ಈ ಊರಿಗೆ ಸಾರಿಗೆಯದ್ದೇ ದೊಡ್ಡ ಸವಾಲು. ಈ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಇದೀಗ ಸಾಯಂಕಾಲ 6.30ಕ್ಕೆ ಸುಳ್ಯದಿಂದ ಹೊರಟು ಎಲಿಮಲೆ – ಸೇವಾಜೆ ಮಾರ್ಗವಾಗಿ ಮಡಪ್ಪಾಡಿಗೆ 7.30ಕ್ಕೆ ತಲುಪಿ ಅಲ್ಲಿ ತಂಗಿ ಮರುದಿನ ಮುಂಜಾನೆ 7ಕ್ಕೆ ಸುಳ್ಯಕ್ಕೆ ಮರಳುವ ಸರಕಾರಿ ಬಸ್ ಸೇವೆ ಆರಂಭವಾಗಿದೆ. ಈ ಮೂಲಕವಾಗಿ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿದೆ.





















































 
 

ಈ ಬಸ್‌ಗೆ ಮಂಗಳವಾರ ಬೆಳಗ್ಗೆ ಸಂಭ್ರಮದಿಂದ ಸ್ವಾಗತ ನೀಡಲಾಯಿತು. ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಜಯರಾಮ, ಮಡಪ್ಪಾಡಿ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ, ನಿರ್ದೇಶಕರಾದ ಸೋಮಶೇಖರ ಕೇವಳ, ಚಂದ್ರಶೇಖರ ಗುಡ್ಡೆ ಹಾಗೂ ಊರವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!
Scroll to Top