250 ಕೋಟಿ ರೂ. ಬಾಕಿ ಚುಕ್ತಾ ಮಾಡದ ರಾಜ್ಯ ಸರ್ಕಾರ: ಅನ್ನಭಾಗ್ಯ ‌ಸರಕು‌‌ ಸಾಗಾಟ ಲಾರಿಗ‌ಳ ಮುಷ್ಕರ

ಡಿಸೇಲ್ ಹಾಕಿಸುವುದಕ್ಕೂ ಕಾಸಿಲ್ಲದೆ ಪರದಾಡುತ್ತಿರುವ ಲಾರಿ ಚಾಲಕ ಮಾಲಕರು

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ‌ದ ಆಹಾರ ಸರಕುಗಳನ್ನು ಸಾಗಿಸುವ ಲಾರಿ ಮಾಲೀಕರಿಗೆ ನೀಡಬೇಕಾದ ಸುಮಾರು 250 ಕೋಟಿ ರೂ. ಬಾಕಿ ಇದ್ದು, ಈ ಹಿನ್ನೆಲೆ ಸೋಮವಾರ ಲಾರಿ ಚಾಲಕ ಮಾಲೀಕರು ಮುಷ್ಕರ ಆರಂಭಿಸಿದ್ದಾರೆ.

ಸರ್ಕಾರದಿಂದ ಬಾಕಿ ಹಣ ಚುಕ್ತಾ ಆಗುವ ವರೆಗೂ 4500 ಲಾರಿಗಳನ್ನು ‌ರಸ್ತೆಗೆ ಇಳಿಸುವ‌ ಮಾತೇ ಇಲ್ಲ ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ. ಕಳೆದ ಐದಾರು ತಿಂಗಳಿನಿಂದ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಈ ಎಲ್ಲಾ ಲಾರಿಗಳು ತಿಂಗಳಿಗೆ ಸುಮಾರು ನಾಲ್ಕೂವರೆ ಲಕ್ಷ ಟನ್ ಆಹಾರ ಧಾನ್ಯಗಳನ್ನು ರಾಜ್ಯದ ಮೂಲೆ ಮೂಲೆಗೆ ತಲುಪಿಸುವ ಕೆಲಸ ನಡೆಯುತ್ತಿದೆ ಎಂದೂ ರಾಜ್ಯ ಲಾರಿ ಮಾಲಕರ ಮತ್ತು ಏಜೆಂಟರುಗಳ ಸಂಘ ತಿಳಿಸಿದೆ.





















































 
 

ಬಾಕಿ ಚುಕ್ತಾ‌ಗೆ ಸಂಬಂಧಿಸಿದ ಹಾಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿಗಳು ಜೂನ್ 25 ರ ಒಳಗಾಗಿ ಬಾಕಿ ಪಾವತಿಸುವ ಭರವಸೆ ನೀಡಿದ್ದರು. ಆದರೆ ಹಣ ಮಾತ್ರ ಈ ವರೆಗೂ ಸಂದಾಯ ಆಗಿಲ್ಲ. ನೀಡಿದ ಗಡುವು ತೀರಿದ ಹಿನ್ನೆಲೆಯಲ್ಲಿ ಲಾರಿಗಳ ಮುಷ್ಕರಕ್ಕೆ ಮುಂದಾಗಿರುವುದಾಗಿದೆ. ಇದರಿಂದಾಗಿ ಚಾಲಕ ಮಾಲೀಕರಿಗೆ ಆರ್ಥಿಕ ಸಂಕಷ್ಟ ಎದುರಾಗುವ ಹಾಗಾಗಿದೆ. ಸಾಗಾಟ ವೆಚ್ಚ ಮತ್ತು ಡಿಸೇಲ್ ವೆಚ್ಚ ಭರಿಸುವುದಕ್ಕೂ ಸಮಸ್ಯೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

error: Content is protected !!
Scroll to Top