ಸುಳ್ಯ: ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ)ಯ ಸದಸ್ಯರಾಗಿ ಉಬರಡ್ಕ ಮಿತ್ತೂರು ಗ್ರಾ.ಪಂ ಅಧ್ಯಕ್ಷೆ ಪೂರ್ಣಿಮಾ ಅಪ್ಪಯ್ಯ ಸೂಂತೋಡು ನೇಮಕಗೊಂಡಿದ್ದಾರೆ.
ಉಬರಡ್ಕ ಮಿತ್ತೂರು ಗ್ರಾ.ಪಂ.ನ ಅಧ್ಯಕ್ಷೆಯಾಗಿ ಕಳೆದ 2 ವರ್ಷದಿಂದ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರು ಅಪ್ಪಯ್ಯ ಸೂಂತೋಡುರವರ ಪತ್ನಿ.
ಶ್ರೀ ಶಾರದಾ ಮಹಿಳಾ ಕಾಲೇಜಿನ ಹಳೆ ವಿದ್ಯಾರ್ಥಿನಿ
ಸುಳ್ಯದ ಶ್ರೀ ಶಾರದಾ ಮಹಿಳಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ ಇವರು ಉತ್ತಮ ಕಲಾವಿದೆಯೂ ಆಗಿದ್ದರು.
ಸಂಸದರು ಅಧ್ಯಕ್ಷರಾಗಿರುವ ಸಮಿತಿಯ ಸದಸ್ಯೆ
ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷರಾಗಿರುವ ಈ ಸಮಿತಿಯ ಮೊದಲ ಸಭೆ ಜು.8 ರಂದು ದ.ಕ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಲಿದೆ.
























