ಬಳ್ಳಾರಿ: ಸಚಿವರುಗಳಿಗೆ ಸಿಎಂ ಬಗ್ಗೆ ಅಸಮಾಧಾನ ಇದೆ ಎಂದು ಮಾಧ್ಯಮಗಳಿಗೆ ಯಾರು ಹೇಳಿದ್ದು? ರಾಜ್ಯದಲ್ಲಿನ ಜ್ವಲಂತ ವಿಷಯಗಳ ಬಗ್ಗೆ ಚರ್ಚೆ ಮಾಡೋಣ. ಹೊರತಾಗಿ ಅನಗತ್ಯ ವಿಚಾರಗಳ ಚರ್ಚೆ ಬೇಡ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಿಂದ ಅನುದಾನ ಇಲ್ಲ ಎಂದಾದರೆ ಕೇಂದ್ರ ಸರ್ಕಾರದಿಂದ ಯಾವ ರೀತಿಯಲ್ಲಿ ಅನುದಾನ ಸಿಗುತ್ತಿದೆ ಎಂದು ಪ್ರಶ್ನೆ ಮಾಡಬೇಕು ಅಲ್ಲವೇ ಎಂದು ಅವರು ಕೇಳಿದ್ದಾರೆ.
ನಮ್ಮ ಸರ್ಕಾರ ಮೊನ್ನೆಯಷ್ಟೇ ಬಜೆಟ್ ಮಂಡಿಸಿದೆ. ನಾವು ಬಿಜೆಪಿಯವರಿಗಿಂತ ಅಧಿಕ ಅನುದಾನ ನೀಡಿದ್ದೇವೆ. ಇಲಾಖೆಗಳಿಗೂ ಖರ್ಚಿಗಿಂತ ಹೆಚ್ಚು ಹಣ ನೀಡಿದ್ದೇವೆ. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಬದಲಾವಣೆ ಸಹಜ. ಹಾಗೆಂದು ಮಾತ್ರಕ್ಕೆ ಸರ್ಕಾರ ಉರುಳುತ್ತದೆ, ಪಕ್ಷ ಬಿಡುತ್ತಾರೆ ಎಂದು ಹೇಳುವುದಕ್ಕಾಗುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ನಮ್ಮದು ಸ್ವತಂತ್ರ ಸರ್ಕಾರ. ಪ್ರಧಾನಿ ಮೋದಿ ಅವರದ್ದು ಸಮ್ಮಿಶ್ರ ಸರ್ಕಾರ. ನಮ್ಮನ್ನಷ್ಟೇ ಏಕೆ ಪ್ರಶ್ನೆ ಮಾಡುವಿರಿ? ಬಿಜೆಪಿಯವರನ್ನೂ ಪ್ರಶ್ನೆ ಮಾಡಿ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
























