ಪುತ್ತೂರು: ಕೃಷ್ಣನಗರದಲ್ಲಿ ಶಿಕ್ಷಣ ಕೈಂಕರ್ಯ ನಡೆಸುತ್ತಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ 2025-26ನೇ ಸಾಲಿನ ವಿದ್ಯಾರ್ಥಿ ಸರಕಾರದ ಪದಗ್ರಹಣ ಸಮಾರಂಭ – IVESTITURE – ಶಾಲಾ ತೆರೆದ ಸಭಾಂಗಣದಲ್ಲಿ ನಡೆಯಿತು.

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಶಣ ನಿರ್ದೇಶಕರಾದ ಬಾಲಚಂದ್ರ ಬಾರ್ತಿಕುಮೇರು ಮುಖ್ಯ ಪದಗ್ರಹಣ ಅಧಿಕಾರಿಗಳಾಗಿ ಆಗಮಿಸಿದ್ದರು. ಮಾತನಾಡುತ್ತಾ ಅವರು ‘ಶಾಲೆಯಲ್ಲಿ ಎರಡು ನಾಯಕರು ಮುಖ್ಯ – ಪ್ರಾಂಶುಪಾಲರು ಮತ್ತು ವಿದ್ಯಾರ್ಥಿ ನಾಯಕ’ ಎಂದರು.ನಾಯಕರು ಸಶಕ್ತವಾಗಿದ್ದಾಗ ದೇಶವಾಗಲೀ, ಸಂಸ್ಥೆಯಾಗಲೀ ದೃಢವಾಗಿರುತ್ತದೆ ಎಂದು ಪ್ರತಿಪಾದಿಸಿದರು. ವಿದ್ಯಾರ್ಥಿ ಸರಕಾರದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುವ ನೈಪುಣ್ಯ ಹೇಗಿರಬೇಕೆಂದು ಅವರು ತಿಳಿಸಿದರು. ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ನಡೆದ ಇಂದಿನ ಕಾರ್ಯಕ್ರಮ ಸರ್ವಾಂಗ ಸುಂದರವಾಗಿದೆ ಮತ್ತು ಶಿಸ್ತುಬದ್ಧವಾಗಿದೆ ಎಂದರು. ಇಲ್ಲಿನ ಹಸಿರು ಹೊದಿಕೆಯ ವಾತಾವರಣದಲ್ಲಿ ಕಲಿಯುತ್ತಿರುವ ನೀವೇ ಧನ್ಯರು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಶಾಲೆಯ ಕ್ರೀಡಾಸಕ್ತ ವಿದ್ಯಾರ್ಥಿಗಳ ಇಚ್ಛಿಸಿದಲ್ಲಿ ಉಚಿತ ತರಬೇತಿಯನ್ನು ನೀಡುವ ಆಶ್ವಾಸನೆ ನೀಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಶಾಲಾಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರು ಮಾತನಾಡಿ ನಾಯಕತ್ವದ ವಿಧಗಳು ಜವಾಬ್ದಾರಿಗಳ ಕುರಿತು ಕಿವಿಮಾತು ನೀಡಿದರು.
ಆಧುನಿಕ ಚುನಾವಣಾ ವಿಧಾನ
ಇಲ್ಲಿ ನಡೆದ ಚುನಾವಣೆಯನ್ನು ಅತ್ಯಾಧುನಿಕ ಆ್ಯಪ್ (App) ಬಳಸಿ ನಿರ್ವಹಿಸಿದ್ದು ವಿಶೇಷವಾಗಿತ್ತು.

ಶಾಲಾ ಸಂಚಾಲಕ ಎ. ವಿ. ನಾರಾಯಣ ಮತ್ತು ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. 2ನೆ ತರಗತಿಯ ಶಿವಾನಿ ಮತ್ತು ತಂಡ ಪ್ರಾರ್ಥಿಸಿದರು. ಶಿಕ್ಷಕಿ ಹಿತಶ್ರೀ ಸ್ವಾಗತಿಸಿದರು. 5ನೆ ತರಗತಿಯ ಅದ್ವಿಕ್ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಶಿಕ್ಷಕಿ ಸುಚಿತಾ ವಿದ್ಯಾರ್ಥಿ ಸರಕಾರ ರಚನೆಯ ಪ್ರಕ್ರಿಯೆಯನ್ನು ವಿವರಿಸಿದರು. ಪ್ರಾಂಶುಪಾಲ ಅಮರನಾಥ್ ಪಟ್ಟೆ ಪ್ರಮಾಣವಚನ ಬೋಧಿಸಿದರು. ಶಿಕ್ಷಕಿ ಸವಿತಾ ಕುಮಾರಿ ವಿದ್ಯಾರ್ಥಿ ಸರಕಾರದ ಪದಾಧಿಕಾರಿಗಳ ಜವಾಬ್ದಾರಿಯನ್ನು ವಿವರಿಸಿದರು. ಶಿಕ್ಷಕಿ ಶ್ವೇತಾ ವಂದಿಸಿದರು. ಶಿಕ್ಷಕಿ ರಾಧಾ ಕಾರ್ಯಕ್ರಮವನ್ನು ನಿರೂಪಿಸಿದರು.
ವಿದ್ಯಾರ್ಥಿ ಸರಕಾರ
ಮುಖ್ಯಮಂತ್ರಿ – 6ನೆ ತರಗತಿಯ ಕವನ್, ಉಪ ಮುಖ್ಯಮಂತ್ರಿ – 5ನೆ ತರಗತಿಯ ಅನ್ವಿತ್ ಕೆ. ಎಲ್., ಶಿಕ್ಷಣ ಮಂತ್ರಿ – 6ನೆ ತರಗತಿಯ ಅದ್ವಿಕ್ ಬಂಜನ್, ಕ್ರೀಡಾ ಮಂತ್ರಿ – 6ನೆ ತರಗತಿಯ ಶ್ರೀಶ, ಸಾಂಸ್ಕೃತಿಕ ಮಂತ್ರಿ – 6ನೆ ತರಗತಿಯ ಆದ್ಯ ಮತ್ತು ಆರೋಗ್ಯ ಮಂತ್ರಿ – 5ನೆ ತರಗತಿಯ ಗನ್ವಿತ್.
























