ಕತಾರ್‌ನಿಂದ ಕೇರಳಕ್ಕೆ ಆಗಮಿಸಿದ ಆರೋಪಿ ಈಗ NIA ಅತಿಥಿ
ಮಂಗಳೂರು: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಗೆ ಸಂಬಂಧಿಸಿದಂತೆ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು NIA ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಕೇರಳಕ್ಕೆ ಕತಾರ್‌ನಿಂದ ಆಗಮಿಸಿದ ಈತನನ್ನು ಅಧಿಕಾರಿಗಳು ಬಂಧಿಸಿರುವುದಾಗಿದೆ.
ಈತನ ಬಗ್ಗೆ ಮಾಹಿತಿ ನೀಡಿದವರಿಗೆ 4 ಲಕ್ಷ ರೂ. ನೀಡುವುದಾಗಿಯೂ ಈ ಹಿಂದೆಯೇ ಎನ್‌ಐಎ ಘೋಷಣೆ ಮಾಡಿತ್ತು. ಆರೋಪಿ PFI ಸೂಚನೆಯಂತೆ ಪ್ರಮುಖ ದಾಳಿಕೋರರು ಮತ್ತು ಇತರ ಆರೋಪಿಗಳಿಗೆ ಸ್ವಯಂಪ್ರೇರಿತನಾಗಿ ಆಶ್ರಯ ನೀಡಿದ್ದ. ಇತರ ಆರೋಪಿಗಳ ಬಂಧನದ ಬಳಿಕ ಕತಾರ್‌ಗೆ ಓಡಿ ಹೋಗಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
























