ಬೆಳ್ತಂಗಡಿ : ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ವೇಣೂರು ಸಮೀಪ ನಡೆದಿದೆ.
ವೇಣೂರು ಬಜಿರೆ ಗ್ರಾಮದ ಪೆರ್ಮನು ಬೆಳ್ಳಿಬೆಟ್ಟು ನಿವಾಸಿ ವೀರಪ್ಪ (74) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ವಿದ್ಯುತ್ ಪರಿವರ್ತಕದ ಬಳಿ ತೋಟದಲ್ಲಿ ಎಲ್.ಟಿ ಲೈನ್ ಮೇಲೆ ತೆಂಗಿನ ಗರಿ ಬಿದ್ದು, ತಂತಿಯು ತುಂಡಾಗಿ ನೀರಿನ ಹಳ್ಳಕ್ಕೆ ಬಿದ್ದು ತಂತಿಯಲ್ಲಿ ವಿದ್ಯುತ್ ಸರಬರಾಜಾಗುವ ಪ್ಯೂಸ಼್ ಹೋಗಿರುವುದು ಕಂಡುಬಂದಿದೆ. ಕಾಲು ದಾರಿಯಲ್ಲಿ ನಡೆದು ಹೋಗುತ್ತಿದ್ದ ವೀರಪ್ಪ ಹಳ್ಳದ ನೀರಿನಲ್ಲಿ ತೇಲಿ ಹೋಗುತ್ತಿದ್ದ ತೆಂಗಿನಕಾಯಿ, ಅಡಕೆಯನ್ನು ಹೆಕ್ಕಲು ಇಳಿದಿದ್ಧರು. ಅಲ್ಲಿಯೇ ಬಿದ್ದಿದ್ದ ವಿದ್ಯುತ್ ತಂತಿಯನ್ನು ಬಳ್ಳಿಯೆಂದು ಭಾವಿಸಿ ಬರಿಗೈಯಲ್ಲಿ ಹಿಡಿದು ಎಳೆದಾಗ , ವಿದ್ಯುತ್ ತಂತಿಯು ಕಂಬಲ್ಲಿರುವ ಇನ್ನೊಂದು ತಂತಿಗೆ ತಾಗಿ ವಿದ್ಯುತ್ ಶಾಕ್ ಗೆ ತಗುಲಿ ಮೃತ ಪಟ್ಟಿದ್ದಾರೆ ಎಂದು ಮೆಸ್ಕಾಂ ತಿಳಿಸಿದ್ದು, ವೇಣೂರು ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
























