ನವದೆಹಲಿ: ಕೇಸರಿ ಸಂತ ಸ್ವಾಮಿ ವಿವೇಕಾನಂದ ಅವರ 123 ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನಗಳನ್ನು ಸಲ್ಲಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸ್ವಾಮಿ ವಿವೇಕಾನಂದರ ಪುಣ್ಯತಿಥಿಯಂದು ಅವರಿಗೆ ನಾನು ನಮನಗಳನ್ನು ಸಲ್ಲಿಸುತ್ತಿದ್ದೇನೆ. ಈ ಸಮಾಜಕ್ಕಾಗಿ ಅವರ ಆಲೋಚನೆಗಳು, ದೃಷ್ಟಿಕೋನಗಳು ನಮಗೆ ಮಾರ್ಗದರ್ಶಕವಾಗಿ ಉಳಿದಿವೆ. ಅವರು ನಮ್ಮ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಹೆಮ್ಮೆ ಮತ್ತು ವಿಶ್ವಾಸವನ್ನು ಹುಟ್ಟುಹಾಕಿದವರು. ಸೇವೆ ಮತ್ತು ಕರುಣೆಯ ಹಾದಿಯಲ್ಲಿ ಹೆಜ್ಜೆ ಹಾಕುವುದಕ್ಕೂ ಅವರು ಒತ್ತು ನೀಡಿದರು ಎಂದು ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರನ್ನು ಪ್ರಧಾನಿ ಮೋದಿ ಅವರು ತಮ್ಮ ಮೇಲೆ ಪ್ರಭಾವ ಬೀರಿದ ಪ್ರಮುಖ ವ್ಯಕ್ತಿ ಎಂದು ಉಲ್ಲೇಖಿಸುತ್ತಾರೆ.
























