ಕರ್ಣಾಟಕ ಬ್ಯಾಂಕ್‌ ಗಿಲ್ಲ ಯಾವುದೇ ಆಪತ್ತು, ಗ್ರಾಹಕರೇ ಅಭದ್ರತೆಯ ಭಯ ಬಿಡಿ

ಕರ್ಣಾಟಕ ಬ್ಯಾಂಕ್ ಎಂಬ ಸಾಂಪ್ರದಾಯಿಕ ಖಾಸಗಿ ಬ್ಯಾಂಕ್ ತನ್ನ ಕಾರ್ಯವೈಖರಿ, ಗ್ರಾಹಕ ಸ್ನೇಹಿ ವರ್ತನೆಗಳ ಮೂಲಕವೇ ಇಂದು ಜನಮಾನಸದಲ್ಲಿ ಹೆಸರು ಪಡೆದಿದೆ. ನಮ್ಮಲ್ಲಿ ಹಲವರು ಇಂದು ಕರ್ಣಾಟಕ ಬ್ಯಾಂಕ್‌ನಲ್ಲಿ ಖಾತೆ ಹೊಂದಿದವರಿದ್ದೇವೆ, ಹಲವಾರು ವ್ಯವಹಾರಗಳನ್ನು ನಡೆಸುತ್ತಿರುವವರಿದ್ದೇವೆ.

ಸುಳ್ಳು ಸುದ್ದಿ ಮೂಲಕ ಕರ್ಣಾಟಕ ಬ್ಯಾಂಕಿನ ಗೌರವಕ್ಕೆ ಧಕ್ಕೆ

ಕರ್ಣಾಟಕ ಬ್ಯಾಂಕಿನ ಬಗ್ಗೆ ಸರಿಯಾದ ದಾಖಲೆಗಳಿಲ್ಲದ ಮತ್ತು ಮಾನ ಹಾನಿಕರ ಸುದ್ದಿ ಬಿತ್ತರಿಸಿ, ಬ್ಯಾಂಕ್ ಬಗ್ಗೆ ಜನರಲ್ಲಿ ಗೊಂದಲ ಹುಟ್ಟುವಂತೆ ನಕಲಿ ಸುದ್ದಿಗಳು ಮಾಡಿದ್ದವು. ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿದೆ ಎಂದು ಸಮಾಜದಲ್ಲಿ ಸುಳ್ಳುಗಳನ್ನು ಬಿತ್ತುವ ಮೂಲಕ ಆ ಬ್ಯಾಂಕಿನಲ್ಲಿ ವ್ಯವಹಾರ ಹೊಂದಿದವರಿಗೆ ಆತಂಕ ಸೃಷ್ಟಿಸಿ, ಆ ಮೂಲಕ ಬ್ಯಾಂಕಿನ ಗೌರವಕ್ಕೆ ಹಾನಿ ಮಾಡಿ ವಿಕೃತ ಆನಂದವನ್ನು ವಿಘ್ನ ಸಂತೋಷಿಗಳು ಅನುಭವಿಸಿದರು. ಆದರೆ ಈ ಬಗ್ಗೆ ಸ್ವತಃ ಕರ್ಣಾಟಕ ಬ್ಯಾಂಕ್‌ನ ಚೇರ್ಮನ್, ನಿರ್ದೇಶಕ ಪ್ರದೀಪ್ ಕುಮಾರ್ ಅವರೇ ಸ್ಪಷ್ಟನೆ ನೀಡಿ ಗ್ರಾಹಕರ ಆತಂಕವನ್ನು ದೂರ ಮಾಡಬೇಕಾಗಿ ಬಂತು. ಸುಳ್ಳು ಸುದ್ದಿಗಳು ಜನರನ್ನು ಎಷ್ಟರ ಮಟ್ಟಿಗೆ ನಾಟುತ್ತವೆ ಎನ್ನುವುದಕ್ಕೆ ಕರ್ಣಾಟಕ ಬ್ಯಾಂಕಿಗೆ ಸಂಬಂಧಿಸಿದ ಈ ಘಟನೆ ಸ್ಪಷ್ಟ ಉದಾಹರಣೆ.





















































 
 

ಬದಲಾವಣೆ ಜಗದ ನಿಯಮ

ಯಾವುದೇ ಒಂದು ಸಂಸ್ಥೆ ಇರಲಿ. ಅದರಲ್ಲಿ ಆಡಳಿತಕ್ಕೆ ಸಂಬಂಧಿಸಿದ ಹಾಗೆ ಬದಲಾವಣೆಗಳು ಸರ್ವೇ ಸಾಮಾನ್ಯ‌. ಇಂತಹ ಬದಲಾವಣೆಗಳಿಂದ ಬ್ಯಾಂಕಿನಲ್ಲಿ ವಹಿವಾಟು ಇರಿಸಿಕೊಂಡ ಗ್ರಾಹಕರಿಗೆ ಸಂಬಂಧಿಸಿದ ಹಾಗೆ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಜೊತೆಗೆ ಒಂದು ವೇಳೆ ಉನ್ನತ ಮಟ್ಟದ ಅಧಿಕಾರಿಗಳು ರಾಜೀನಾಮೆ ನೀಡಿದರು ಎಂದ ಮಾತ್ರಕ್ಕೆ ಅಲ್ಲಿ ಏನೋ ಎಡವಟ್ಟು ಸಂಭವಿಸಿದೆ, ಅವ್ಯವಹಾರ ನಡೆದಿದೆ ಎಂದು ಹೇಳುವುದು ತಪ್ಪು. ಒಂದು ವೇಳೆ ಅವ್ಯವಹಾರ ಸಂಭವಿಸಿದ್ದೇ ಆದಲ್ಲಿ ಅಂತಹ ಆರೋಪಿಗಳ ಮೇಲೆ ಬ್ಯಾಂಕ್ ಆಡಳಿತ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಮಹತ್ತರವಾದ ಜವಾಬ್ದಾರಿ ಅವರ ಹೆಗಲ ಮೇಲೆ ಇರುತ್ತದೆ. ಅದನ್ನು ಆಡಳಿತ ಮಂಡಳಿಯ ಸದಸ್ಯರು ನಿಭಾಯಿಸುತ್ತಾರೆ ಎನ್ನುವುದು ನಿರ್ವಿವಾದ.

ಸುದೀರ್ಘ ಇತಿಹಾಸದ ಬ್ಯಾಂಕ್ ಒಂದೇ ಬಾರಿಗೆ ಕೈಕೊಡುವುದೇ?

ಹೇಳಿ ಕೇಳಿ ಕರ್ಣಾಟಕ ಬ್ಯಾಂಕ್ ಸುಮಾರು 101 ವರ್ಷಗಳಿಂದ ಚಾಲ್ತಿಯಲ್ಲಿದ್ದು, ಆರ್ಥಿಕ ವ್ಯವಹಾರಗಳನ್ನು ನಡೆಸಿಕೊಂಡು ಬರುತ್ತಿದೆ. ಒಂದೇ ಬಾರಿಗೆ ಈ ಬ್ಯಾಂಕ್ ತನ್ನ ಗ್ರಾಹಕರಿಗೆ ಪಂಗನಾಮ ಹಾಕುವ ಸಾಧ್ಯತೆ ಇಲ್ಲ ಎನ್ನುವುದನ್ನು ಪುಟ್ಟ ಮಕ್ಕಳೂ ಅರ್ಥ ಮಾಡಿಕೊಳ್ಳಬಹುದು. ಷೇರು ಮಾರುಕಟ್ಟೆ ಕುಸಿಯುವುದು, ಜಿಗಿಯುವುದು ಸಾಮಾನ್ಯ. ಇಂತಹ ಹಲವಾರು ಕುಸಿತಗಳನ್ನು ಬ್ಯಾಂಕ್‌ ಈ ಹಿಂದೆಯೂ ಕಂಡಿರಬಹುದು. ಆದರೂ 101 ವರ್ಷಗಳ ಸುದೀರ್ಘ ಇತಿಹಾಸವನ್ನು ಅದು ದಾಖಲಿಸಿದೆ. ಇದಕ್ಕೆ ಕಾರಣ ಆ ಬ್ಯಾಂಕಿನ ನಂಬಿಕಸ್ಥ ವ್ಯವಹಾರ ಅಲ್ಲವೇ. ಯಾವುದೋ ಒಂದು ಸಂಸ್ಥೆ ಬ್ಯಾಂಕಿನ ಬಗ್ಗೆ ಹಬ್ಬುತ್ತಿರುವ ಅಪಪ್ರಚಾರದ ನಡುವೆಯೂ 400 ಕೋಟಿ ರೂ. ಠೇವಣಿ ಇಡಲು ಮುಂದಾಗಿದೆ ಎಂದರೆ ಇದು ಕರ್ಣಾಟಕ ಬ್ಯಾಂಕ್ ಮೇಲಿನ ವಿಶ್ವಾಸವಲ್ಲದೆ ಮತ್ತೇನು?

ಬಂಡವಾಳದ ಕೊರತೆ ಇಲ್ಲ

ಕರ್ಣಾಟಕ ಬ್ಯಾಂಕಿಗೆ ಸಂಬಂಧಿಸಿದ ಹಾಗೆ ಅದರ ಆಂತರಿಕ ಮಾರ್ಗಸೂಚಿ 19.5 % ದಷ್ಟಿದೆ. ಆರ್‌ಬಿಐ ಸೂಚನೆಯಂತೆ ಯಾವುದೇ ಒಂದು ಬ್ಯಾಂಕಿನ ಬಂಡವಾಳ ಸಾಮರ್ಥ್ಯ ಅನುಪಾತ ಕನಿಷ್ಟ 11.5% ಗಳಷ್ಟಾದರೂ ಇರಲೇ ಬೇಕು. ಆದರೆ ಕರ್ಣಾಟಕ ಬ್ಯಾಂಕಿನ ಈ ಅನುಪಾತ ಅದಕ್ಕಿಂತ ಹೆಚ್ಚೇ ಇದೆ. ಇದು ನಾಲ್ಕು ವರ್ಷಕ್ಕೆ ಸಾಕಾಗುವಷ್ಟು ಬಂಡವಾಳ ಇದೆ ಎನ್ನುವುದನ್ನು ಸೂಚಿಸುತ್ತದೆ. ಭಾರತದ ಕೆಲವೇ ಬ್ಯಾಂಕುಗಳು ಮಾತ್ರ ಆರ್‌ಬಿಐ ಸೂಚಿಸಿದ ಅನುಪಾತಕ್ಕಿಂತ ಹೆಚ್ಚು ಅನುಪಾತ ಹೊಂದಿದ್ದು, ಇದರಲ್ಲಿ ಕರ್ಣಾಟಕ ಬ್ಯಾಂಕ್ ಸಹ ಸ್ಥಾನ ಪಡೆದಿದೆ. ಇದು ಜನರಲ್ಲಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುವ ಸಂಗತಿಯೇ ಸರಿ.

ಜಗತ್ತು ಈಗ ವೇಗವಾಗಿ ಬೆಳೆಯುತ್ತಿದೆ. ಈ ವೇಗವನ್ನು ಅನುಸರಿಸಿ ನಾವೂ ಬೆಳೆಯಬೇಕು. ಇದಕ್ಕೆ ಬ್ಯಾಂಕ್‌ಗಳೂ ಹೊರತಾಗಿಲ್ಲ. ಇಂತಹ ಸಂದರ್ಭದಲ್ಲಿ ಬದಲಾವಣೆ, ಏರಿಳಿತಗಳು ಸಹಜ. ಪ್ರಗತಿಯನ್ನು ಸಾಗಿಸಲು, ಆಧುನಿಕತೆಯ ಜೊತೆಗೆ ಅಗತ್ಯ ಕೌಶಲಗಳನ್ನು ಬೆಳೆಸಿಕೊಂಡು ಪ್ರಗತಿ ಸಾಧಿಸುವುದು, ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿವುದು ಕರ್ಣಾಟಕ ಬ್ಯಾಂಕಿನ ಉದ್ದೇಶ. ಬ್ಯಾಂಕ್ ಸುಭದ್ರವಾಗಿದೆ, ಅಭದ್ರತೆಯ ಭಯ ಬೇಡ ಎಂದು ಅದರ ನಿರ್ದೇಶಕರೇ ಸ್ಪಷ್ಟವಾಗಿ ಹೇಳಿದ್ದಾರೆ.

ಹಲವಾರು ಜನರು ವಹಿವಾಟು ಹೊಂದಿರುವ ಯಾವುದೇ ಸಂಸ್ಥೆಗಳ ಬಗ್ಗೆ ಇಂತಹ ಅನಗತ್ಯ ಸುಳ್ಳು ಸುದ್ದಿಗಳನ್ನು ಬಿತ್ತರಿಸಿದವರ ಹಿಂದಿರುವ ಸಂಚು ಶೀಘ್ರವೇ ಬಯಲಾಗಲಿ. ಗ್ರಾಹಕ ಸ್ನೇಹಿ ಕರ್ಣಾಟಕ ಬ್ಯಾಂಕಿನ ಮೇಲೆ ಜನರ ನಂಬುಗೆ ದುಪ್ಪಟ್ಟಾಗಲಿ ಎಂಬುದೇ ಸದಾಶಯ.

error: Content is protected !!
Scroll to Top