ಮುಂಬಯಿ: ಶಿಷ್ಯನನ್ನೇ ಲೈಂಗಿಕ ಸುಖಕ್ಕೆ ಬಳಸಿಕೊಂಡ ಶಿಕ್ಷಕಿ

ಪಂಚತಾರಾ ಹೋಟೆಲ್‌ಗಳಲ್ಲಿ ಶಿಷ್ಯನ ಮೇಲೆ ದೌರ್ಜನ್ಯ ಎಸಗಿದ ಪ್ರತಿಷ್ಠಿತ ಶಾಲೆಯ ಶಿಕ್ಷಕಿ

ಮುಂಬೈ: ಪ್ರತಿಷ್ಠಿತ ಶಾಲೆಯ ಶಿಕ್ಷಕಿಯೊಬ್ಬಳು ತನ್ನ ಹದಿಹರೆಯದ ಶಿಷ್ಯನನ್ನೇ ಲೈಂಗಿಕ ಸುಖಕ್ಕೆ ಬಳಸಿಕೊಂಡ ಆಘಾತಕಾರಿ ಘಟನೆ ಮುಂಬಯಿಯಲ್ಲಿ ಬೆಳಕಿಗೆ ಬಂದಿದೆ. 11ನೇ ತರಗತಿ ವಿದ್ಯಾರ್ಥಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ 40ರ ಹರೆಯದ ಶಿಕ್ಷಕಿಯನ್ನು ಪೋಕ್ಸೊ ಕಾಯ್ದೆಯ ಅಡಿ ಬಂಧಿಸಲಾಗಿದೆ.

ಮುಂಬೈನ ಪ್ರಖ್ಯಾತ ಶಾಲೆಯ 40 ವರ್ಷದ ಇಂಗ್ಲಿಷ್‌ ಶಿಕ್ಷಕಿ ಕಳೆದ ಒಂದು ವರ್ಷದಲ್ಲಿ 16 ವರ್ಷದ ವಿದ್ಯಾರ್ಥಿಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷಕಿಗೆ ಮದುವೆಯಾಗಿದ್ದು, ಮಕ್ಕಳಿದ್ದಾರೆ. ಈಗ ಆಕೆಯ ವಿರುದ್ಧ ಪೋಕ್ಸೊ ಜೊತೆಗೆ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ ಅಡಿ ಕೇಸ್‌ ದಾಖಲಾಗಿದೆ.





















































 
 

11ನೇ ತರಗತಿಯ ವಿದ್ಯಾರ್ಥಿಯನ್ನು ಶಿಕ್ಷಕಿ ಲೈಂಗಿಕ ಶೋಷಣೆಗೆ ಬಳಿಸಕೊಂಡಿದ್ದಾಳೆ. ಡಿಸೆಂಬರ್‌ 2023ರಲ್ಲಿ ಶಾಲೆಯ ವಾರ್ಷಿಕೋತ್ಸವದ ಡ್ಯಾನ್ಸ್‌ಗೆ ವಿದ್ಯಾರ್ಥಿಗಳ ಗುಂಪನ್ನು ಮಾಡಲಾಗಿತ್ತು. ಈ ವೇಳೆ ಶಿಕ್ಷಕಿ ಅಪ್ರಾಪ್ತನತ್ತ ಆಕರ್ಷಿತಳಾಗಿದ್ದಳು. ಜನವರಿ 2024ರಲ್ಲಿ ಅವಳು ವಿದ್ಯಾರ್ಥಿಗೆ ಲೈಂಗಿಕ ಸಂಜ್ಞೆ ನೀಡಲು ಆರಂಭಿಸಿದ್ದಳು. ಶಿಕ್ಷಕಿಯ ಈ ವರ್ತನೆ ನೋಡಿ ಆರಂಭದಲ್ಲಿ ವಿದ್ಯಾರ್ಥಿ ಆಕೆಯಿಂದ ದೂರ ಸರಿಯಲು ಆರಂಭಿಸಿದ್ದ. ಈ ವೇಳೆ ಶಿಕ್ಷಕಿ ಸ್ನೇಹಿತೆಯೊಬ್ಬಳನ್ನು ಬಳಸಿಕೊಂಡು ಆತನ ಜೊತೆ ಸಂಬಂಧ ಬೆಳೆಸಿದಳು. ಆಕೆಯ ಸ್ನೇಹಿತೆ ವಿದ್ಯಾರ್ಥಿಯ ಜೊತೆ ಮಾತನಾಡಿ ವಯಸ್ಸಾದ ಮಹಿಳೆಯರು ಮತ್ತು ಹದಿಹರೆಯದ ಹುಡುಗರ ನಡುವಿನ ಸಂಬಂಧಗಳು ಈಗ ಸಾಮಾನ್ಯ, ನಿಮ್ಮ ಜೋಡಿ ಸ್ವರ್ಗದಲ್ಲೇ ನಿಶ್ಚಯವಾಗಿದೆ ಎಂದು ಹೇಳಿ ಮನವೊಲಿಸಿದ್ದಳು. ಕೃತ್ಯಕ್ಕೆ ಸಾಥ್‌ ನೀಡಿದ್ದಕ್ಕೆ ಶಿಕ್ಷಕಿಯ ಸ್ನೇಹಿತೆಯ ವಿರುದ್ಧವೂ ಆರೋಪ ಹೊರಿಸಲಾಗಿದೆ.

ಶಿಕ್ಷಕಿ ವಿದ್ಯಾರ್ಥಿಯನ್ನು ಕಾರಿನಲ್ಲಿ ಫೈವ್‌ ಸ್ಟಾರ್‌ ಹೋಟೆಲಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಳು. ಕೃತ್ಯ ಎಸಗಿದ ಕೆಲ ದಿನಗಳ ಬಳಿಕ ವಿದ್ಯಾರ್ಥಿ ಆತಂಕಗೊಂಡಿದ್ದ. ಈ ವೇಳೆ ಶಿಕ್ಷಕಿ ಆತಂಕ ನಿವಾರಕ ಮಾತ್ರೆಗಳನ್ನು ನೀಡಿದ್ದಳು. ಶಿಕ್ಷಕಿಯ ಕಾಮ ತೃಷೆ ಎಷ್ಟಿತ್ತು ಅಂದರೆ ಕೆಲವೊಮ್ಮೆ ವಿದ್ಯಾರ್ಥಿಗೆ ಬಲವಂತವಾಗಿ ಮದ್ಯ ಕುಡಿಸಿ ಪಂಚತಾರಾ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಲೈಂಗಿಕ ಸುಖಕ್ಕಾಗಿ ಪೀಡಿಸುತ್ತಿದ್ದಳು.

ಪೋಷಕರು ಪುತ್ರನ ನಡವಳಿಕೆಯಲ್ಲಿನ ಬದಲಾವಣೆಯನ್ನು ಗಮನಿಸಿ ಅವನನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿ ತನ್ನ ಕಷ್ಟವನ್ನು ಹೇಳುತ್ತಿದ್ದಂತೆ ಶೀಘ್ರವೇ ಆತ 12ನೇ ತರಗತಿ ತೇರ್ಗಡೆಯಾಗುತ್ತಾನೆ ಎಂಬ ಕಾರಣಕ್ಕೆ ಕುಟುಂಬ ಈ ವಿಚಾರವನ್ನು ರಹಸ್ಯವಾಗಿ ಇಡಲು ಮುಂದಾಗಿತ್ತು. ಆದರೆ 12ನೇ ತರಗತಿ ತೇರ್ಗಡೆಯಾಗಿ ಶಾಲೆ ತೊರೆದ ಬಳಿಕವೂ ಶಿಕ್ಷಕಿ ಮತ್ತೆ ವಿದ್ಯಾರ್ಥಿಯನ್ನು ಸಂಪರ್ಕಿಸಲು ಮುಂದಾಗಿದ್ದಾಳೆ. ಇತ್ತೀಚೆಗೆ ಶಿಕ್ಷಕಿ ತನ್ನ ಮನೆ ಕೆಲಸದಾಕೆಯನ್ನುವಿದ್ಯಾರ್ಥಿಯ ಮನೆಗೆ ಕಳುಹಿಸಿ ಭೇಟಿಯಾಗಲು ಬರುವಂತೆ ಹೇಳಿದ್ದಳು. ಬಳಿಕ ಬಾಲಕ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾನೆ.

error: Content is protected !!
Scroll to Top