ಪುತ್ತೂರು: ಮನೆಯೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಕುರಿತು ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ ಯುವತಿಯನ್ನು ರಕ್ಷಿಸಿ, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಘಟನೆ ಸಾಮೆತ್ತಡ್ಕದಲ್ಲಿ ನಡೆದಿದೆ.
ಪೊಲೀಸರ ದಾಳಿ ವೇಳೆ ಮನೆ ಮಾಲಕ, ಯುವತಿ ಮತ್ತು ಪುರುಷನನ್ನು ಅಲ್ಲಿಂದ ತಪ್ಪಿಸಲು ಸಹಾಯ ಮಾಡಿದ್ದಾರೆ. ಆದರೆ ಬೆನ್ನತ್ತಿದ್ದ ಪೊಲೀಸರು ಯುವತಿಯನ್ನು ರಕ್ಷಿಸಿದ್ದಾರೆ.
ಸುಳ್ಯ ಮೂಲದ ಪುರುಷ ಮತ್ತು ಅವರಿಗೆ ಮನೆ ನೀಡಿದ ವಿಲ್ಫ್ರೆಡ್ ಎಂಬವರನ್ನು ವಶಕ್ಕೆ ಪಡೆದು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
























