ಪುತ್ತೂರು: ಧಾನ್ಯದ ಸಹಕಾರಿ ಸಂಘದ 2025-30ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಯು. ಪೂವಪ್ಪ, ಉಪಾಧ್ಯಕ್ಷರಾಗಿ ಲೋಕೇಶ್ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ಸಂಘದ ಕಛೇರಿಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಆಡಳಿತ ಮಂಡಳಿಗೆ ನಿರ್ದೇಶಕ ರ ಆಯ್ಕೆ ಪ್ರಕ್ರಿಯೆ ಚುನಾವಣಾಧಿಕಾರಿ ಶೋಭಾ ಎನ್.ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ನಿರ್ದೇಶಕರಾಗಿ ಅಜಿತ್ ಕುಮಾರ್, ಕೆ. ಸಂಜೀವ ನಾಯಕ್, ಕೆ. ಸಂತೋಷ್ ಕುಮಾರ್, ಚಂದ ಶೇಖರ ರಾವ್ ಬಪ್ಪಳಿಗೆ, ನಹುಷ ಪಿ.ವಿ., ಯು. ಪೂವಪ್ಪ, ರಾಜೇಶ್ ಬನ್ನೂರು, ಜಯರಾಜ್ ಯು. ಲೋಕೇಶ್ ಹೆಗ್ಡೆ, ಸುಧಾ ನಾಗೇಶ್ ರಾವ್ ಮತ್ತು ಎಂ. ನಾರಾಯಣ ನಾಯ್ಕ್ ಅವಿರೋಧವಾಗಿ ಆಯ್ಕೆಗೊಂಡರು. ನೂತನ ಆಡಳಿತ ಮಂಡಳಿಗೆ ಕಾರ್ಯದರ್ಶಿ ಯತೀಂದ್ರನಾಥ್ ಶುಭ ಹಾರೈಸಿದರು.
























