ನವದೆಹಲಿ: ಭಾರತವು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಸಶಕ್ತಗೊಳಿಸುವ ಗುರಿಯನ್ನು ಹೊಂದಿದ್ದು, ಬಂಕರ್ ಬರ್ಸ್ಟರ್ ಕ್ಷಿಪಣಿ ಯೋಜನೆಯನ್ನು ತೀವ್ರಗೊಳಿಸಿದೆ.
ಅಮೆರಿಕಾದ ಬಂಕರ್ ಬರ್ಸ್ಟರ್ ಬಾಂಬಿಗಿಂತಲೂ ಹೆಚ್ಚು ಬಲಿಷ್ಟವಾದ ಅಸ್ತ್ರವನ್ನು ಭಾರತ ಅಭಿವೃದ್ಧಿ ಮಾಡುತ್ತಿದೆ. ಈ ಹೊಸ ಅಗ್ನಿ -5 ಕ್ಷಿಪಣಿಯು ವಾಯುಸೇನೆಯ ಹೊಸ ಆವೃತ್ತಿಯಾಗಿದ್ದು ಇದು ಶತ್ರು ರಾಷ್ಟ್ರಗಳ ರಹಸ್ಯ ಪರಮಾಣು ಬಂಕರ್ಗಳನ್ನು ಕೆಲವೇ ನಿಮಿಷಗಳಲ್ಲಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ.
ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಈ ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈಗಾಗಲೇ ಬಾಲಕೋಟ್ ದಾಳಿಯ ಸಂದರ್ಭದಲ್ಲಿ ನಮ್ಮ ಸೇನೆ SPICE-2000, HAMMER ಕ್ಷಿಪಣಿಗಳಂತಹ ನಿಖರ ಗುರಿಯ ಶಸ್ತ್ರಾಸ್ತ್ರಗಳ ಬಳಕೆ ಮಾಡಿತ್ತು. ಆದರೆ ಬಂಕರ್ ಬರ್ಸ್ಟರ್ ಬಾಂಬುಗಳಿಗೆ ಸಮನಾದ ಅಸ್ತ್ರವನ್ನು ಇನ್ನೂ ಅಭಿವೃದ್ಧಿ ಮಾಡಿರಲಿಲ್ಲ. ಈ ಹೊಸ ಕ್ಷಿಪಣಿ ಯೋಜನೆ ಭಾರತದ ರಕ್ಷಣಾ ಶಕ್ತಿಯನ್ನು ಆಧುನೀಕರಿಸುವ ಭಾಗವಾಗಿದೆ.
ಈ ಯೋಜನೆ ದೇಶದ ಭದ್ರತೆಯ ದೃಷ್ಟಿಯಿಂದಲೂ ಪ್ರಮುಖ ಪಾತ್ರ ವಹಿಸಲಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
























