ಬೆಂಗಳೂರು: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರು ಭರ್ತಿಯಾಗಿದ್ದು, ಸಿ.ಎಂ. ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಇನ್ನಿತರರ ಜೊತೆಗೆ ಸೋಮವಾರ ಜಲಾಶಯಕ್ಕೆ ಆಗಮಿಸಿ ಕಾವೇರಿ ನದಿಗೆ ಬಾಗಿನ ಸಮರ್ಪಿಸಿದರು.
ಬಾಗಿನ ಸಮರ್ಪಣೆ ಹಿನ್ನೆಲೆಯಲ್ಲಿ ಜಲಾಶಯಕ್ಕೆ ವೈದಿಕರ ತಂಡ ಬೆಳಗ್ಗಿನಿಂದಲೇ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳನ್ನು ನಡೆಸಿತು. ಜಲಾಶಯದ ಕೆಳಗಿನ ಕಾವೇರಿಯ ಪ್ರತಿಮೆಗೂ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು.
ಕೆಆರ್ಎಸ್ನಲ್ಲಿ ಇದೆ ಮೊದಲ ಬಾರಿಗೆ ಜೂನ್ ತಿಂಗಳಿನಲ್ಲೇ ಡ್ಯಾಂ ಭರ್ತಿಯಾಗಿದ್ದು, ಇದೊಂದು ದಾಖಲೆಯಾಗಿದೆ. ಈ ದಾಖಲೆ ಮುಂದಿನ ತಲೆಮಾರುಗಳಿಗೂ ತಿಳಿಯಬೇಕು. ಈ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಗೆಯೇ ಉತ್ತಮ ಮಳೆಯ ಕಾರಣಕ್ಕೆ ಎಲ್ಲಾ ಜಲಾಶಯಗಳು ಭರ್ತಿಯಾಗಿ, ನಾಲೆಗಳಿಗೆ ತಕ್ಷಣದಿಂದಲೇ ನೀರು ಬಿಡುವಂತೆಯೂ ಆದೇಶಿಸಿದ್ದಾರೆ.
























