ಅಕ್ಷರ ದಾಸೋಹ ನೌಕರರ ಸಂಘದ  ತಾಲೂಕು ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ರಂಜಿತ ಕೋಡಿಂಬಾಡಿ , ಪ್ರಧಾನ ಕಾರ್ಯದರ್ಶಿಯಾಗಿ ಲತಾ ಬನ್ನೂರು ಆಯ್ಕೆ

ಪುತ್ತೂರು: ಅಕ್ಷರ ದಾಸೋಹ ನೌಕರರ ಪುತ್ತೂರು ತಾಲೂಕು ಸಮಾವೇಶವು ಪುತ್ತೂರು ಮಾಜಿ ಸೈನಿಕರ ಭವನದಲ್ಲಿ  ನಡೆಯಿತು.

ಸುಧಾ ಎಕ್ಕಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಡಬ ತಾಲೂಕು ಅಧ್ಯಕ್ಷ, ಸಂಘದ ಗೌರವಾಧ್ಯಕ್ಷ ಪಿ.ಕೆ ಸತೀಶನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನ್ಯಾಯವಾದಿ ಬಿ.ಎಂ.ಭಟ್‌ ಮಾತಾಡಿ, 2025  ಜುಲೈ 9 ರಂದು ಜೆಸಿಟಿಯು ನೇತೃತ್ವದಲ್ಲಿ ನಡೆಯುವ ಅಖಿಲ ಭಾರತ  ಮುಷ್ಕರದ ಬಗ್ಗೆ ವಿವರಣೆ ನೀಡಿದರು. ಇದರ ಅಂಗವಾಗಿ ಜುಲೈ 9 ರಂದು ಪುತ್ತೂರು ಮತ್ತು ಕಡಬ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಅಡುಗೆ ಬಂದ್ ಮಾಡಿ ಎಲ್ಲಾ ಬಿಸಿಯೂಟ ತಯಾರಿಸುವ ನೌಕರರು ತಮ್ಮ ವೇತನ ಏರಿಕೆ, ಕೆಲಸದ ಭದ್ರತೆ, ಮಕ್ಕಳ ಹಾಜರಾತಿ ಏರಿಳಿತದ ಆಧಾರದಲ್ಲಿ ಕೆಲಸದಿಂದ ತೆಗೆಯಬಾರದು, ಒಂದು ಶಾಲೆಯಲ್ಲಿ ಕನಿಷ್ಟ 2 ಅಡುಗೆಯವರು ಕಡ್ಡಾಯ ಇರಬೇಕು ಮತ್ತು ಈಗಿರುವಕಾರ್ಮಿಕರ ಹಕ್ಕು ಸವಲತ್ತುಗಳ ಕಾನೂನನ್ನು ರದ್ದುಪಡಿಸಿ ಮಾಲಕರ ಪರವಾದ ನೂತನ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲು ಕೇಂದ್ರ ಸರಕಾರವ ಮುಂದಾಗಿರುವುದನ್ನು ವಿರೋದಿಸಿ ಪುತ್ತೂರಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು. ಅಕ್ಷರದಾಸೋಹ ಸಮಾವೇಶವು ಪುತ್ತೂರುತಾಲೂಕು ಸಮಿತಿಯನ್ನು ಪುನರಚಿಸಲಾಯಿತು.

ಸಂಘದ  ಗೌರವಾಧ್ಯಕ್ಷರಾಗಿ ಪಿಕೆ ಸತೀಶನ್, ಅಧ್ಯಕ್ಷರಾಗಿ ರಂಜಿತಾ ಕೋಡಿಂಬಾಡಿ, ಉಪಾಧ್ಯಕ್ಷರಾಗಿ ಲೀಲಾವತಿ ಮುಂಡೂರು, ಪ್ರಧಾನ ಕಾರ್ಯದರ್ಶಿಯಾಗಿ ಲತಾ ಬನ್ನೂರು, ಸಹಕಾರ್ಯದರ್ಶಿಯಾಗಿ ಅಶ್ವಿನಿ ನರಿಮೊಗರು, ಖಜಾಂಜಿಯಾಗಿ ತೆರೆಸಾ ನಿಡ್ಪಳ್ಳಿ, ಸಲಹೆಗಾರರುಗಳಾಗಿ ಬಿ.ಎಂ.ಭಟ್, ಈಶ್ವರಿ ಆಯ್ಕೆಯಾದರು. ಸಮಿತಿ ಸದಸ್ಯರುಗಳಾಗಿ ಪ್ರೇಮ ನೆಕ್ಕಿಲಾಡಿ, ಜಯಂತಿ ಹೀರೇಬಂಡಾಡಿ, ಸುಜಾತ ಮಂಜಲುಪಡ್ಪು, ಕಲ್ಯಾಣಿ ಉಪ್ಪಳಿಗೆ, ರೇಷ್ಮಾ ಬೊಳುವಾರು, ಪದ್ಮಾವತಿ ಸುಳ್ಯಪದವು, ಶಾಂಭವಿ ಕಾವು, ಸುಧಾಎಕ್ಕಡ್ಕ, ವೇದಾ ಕೊಳ್ತಿಗೆ, ಲಕ್ಷ್ಮಿ ಮುಕ್ವೆ, ಜಯಂತಿ ಮುರ, ತೇಜಸ್ವಿನಿ ಕೆದಂಬಾಡಿ, ಪ್ರೇಮ ಕೆಯ್ಯೂರು, ಸುನೀತ ಮಾಡನ್ನೂರು, ಪ್ರಮೀಳಾ ಪೆರಿಯಡ್ಕ, ರಮಣಿ ಸರ್ವೆ, ಲೀಲಾವತಿ ಬೆಟ್ಟಂಪಾಡಿ, ಚೈತ್ರಒಡ್ಯ, ವಾರಿಜ ಸೂರೈಂಬೈಲು, ಸೀತ ಪರ್ಲಡ್ಕ ಮೊದಲಾದವರು ಆಯ್ಕೆಯಾದರು.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top