ಹೈದರಾಬಾದ್: ಶಸ್ತ್ರಧಾರಿಗಳಾದ ನಕ್ಸಲರ ಜೊತೆಗೆ ಯಾವ ರೀತಿಯ ಮಾತುಕತೆಯನ್ನೂ ನಾವು ನಡೆಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ಶಸ್ತ್ರ ಹಿಡಿದ ನಕ್ಸಲರು ಅದನ್ನು ತೊರೆದು ಪೊಲೀಸರ ಮುಂದೆ ಬಂದು ಶರಣಾಗಲಿ. ಅವರು ಸಮಾಜದ ಮುಖ್ಯ ಭೂಮಿಕೆಗೆ ಬರಲಿ ಎಂದು ಶಾ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷ, ನಕ್ಸಲರ ಜೊತೆಗೆ ಮಾತನಾಡಿ ಎಂದು ಕೇಂದ್ರ ಸರ್ಕಾರವನ್ನು ಕೋರುತ್ತದೆ. ಆದರೆ ನಮ್ಮ ಸರ್ಕಾರದ ನೀತಿ ನಾವು ಶಸ್ತ್ರ ಹಿಡಿದ ಯಾರೊಂದಿದೂ ಮಾತುಕತೆಗೆ ಸಿದ್ಧರಿಲ್ಲ ಎನ್ನುವುದಾಗಿದೆ. ಒಂದು ವೇಳೆ ಮಾವೋವಾದಿಗಳು ಶರಣಾಗದೆ ಇದ್ದರೂ 2026 ರ ಮಾರ್ಚ್ 30 ರೊಳಗಾಗಿ ಭಾರತವನ್ನು ನಕ್ಸಲ್ ಮುಕ್ತ ದೇಶವನ್ನಾಗಿ ಮಾಡಿಯೇ ಸಿದ್ಧ ಎಂದು ಅವರು ಹೇಳಿದ್ದಾರೆ.
























